ಅಂಕೋಲಾ: ಅಬಕಾರಿ ಇಲಾಖೆಯ ಪ್ರೊಬೆಷನರಿ ಮಹಿಳಾ ಅಧಿಕಾರಿಯೊಬ್ಬರು ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅಬಕಾರಿ ಪ್ರೊಬೆಷನರಿ ಪಿಎಸ್‌ಐ ಪ್ರೀತಿ ರಾಥೋಡ್ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದಿದ್ದಾರೆ. ಕಾರವಾರ ಮೂಲದ ಮುಸ್ತಾಕ್ ಎಂಬುವರು ಅಂಕೋಲದ ಹಾರವಾಡದಲ್ಲಿ ಮದ್ಯ ಸಾಗಿಸುತ್ತಿದ್ದರು. ಈ ವೇಳೆ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮದ್ಯ ಸಾಗಿಸಲು ಬಳಸಲಾದ ಬೈಕ್ ಮುಸ್ಯಾಕ್‌ನ ಸ್ನೇಹಿತನಿಗೆ ಸೇರಿದ್ದು ಆತನ ಮೇಲೆಯೂ ಕೇಸ್ ದಾಖಲಿಸೋದಾಗಿ ಪ್ರೀತಿ ರಾಥೋಡ್ ಬೆದರಿಕೆ ಹಾಕಿದ್ದರು. ಹಾಗೂ ಪ್ರಕರಣ ಅಲ್ಲಿಗೆ ಮುಗಿಸಲು 50 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಮುಸ್ತಾಕ್ ಅವರು ಎಸಿಬಿ ಮೊರೆ ಹೋಗಿದ್ದರು. ನಿನ್ನೆ ಮಂಗಳವಾರ ರಾತ್ರಿ ಮುಸ್ತಾಕ್‌ನಿಂದ ಹಣ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಪ್ರೀತಿ ರಾಥೋಡ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಬಕಾರಿ ಪ್ರೊಬೆಷನರಿ ಪಿಎಸ್‌ಐ ಪ್ರೀತಿ ರಾಥೋಡ್ ಸದ್ಯ ನ್ಯಾಯಾಂಗ ವಶದಲ್ಲಿದ್ದಾರೆ.
PublicNext
20/04/2022 12:04 pm