ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ:JNU-ABVP ವಿದ್ಯಾರ್ಥಿಗಳ ಮಾರಾಮಾರಿ-ಹಲವರಿಗೆ ಗಾಯ-ಪೊಲೀಸ್ ನಿಯೋಜನೆ

ನವದೆಹಲಿ: ಜವಾಹರ ಲಾಲ್ ನೆಹರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ABVP ಸಂಘಟನೆಯವರು ಬಡಿದಾಡಿಕೊಂಡಿದ್ದಾರೆ. ಇದರ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಇವರ ಕಿತ್ತಾಟದ ಹಿಂದೆ ಶ್ರೀರಾಮನವಮಿಯ ಆಚರಣೆನೆ ಇದೆ. ಹೌದು. JNU ವಿದ್ಯಾರ್ಥಿಗಳು ಇದನ್ನ ಆಚರಿಸದಂತೆ ಅಡ್ಡಿ ಮಾಡಿದ್ದಾರೆ. ಈ ಒಂದು ಕಾರಣಕ್ಕೇನೆ ಜಗಳ ಶುರು ಆಗಿದೆ ಅಂತಲೇ ಎಬಿವಿಪಿ ಸಂಘಟನೆ ದೂರಿದೆ.

ಆದರೆ, ರಾಮನವಮಿ ದಿನವೇ ಹಾಸ್ಟೆಲ್‌ನಲ್ಲಿ ಮಾಂಸಾಹಾರ ಕೊಡಲೇಬಾರದು ಎಂದು ಎಬಿವಿಪಿ ವಿದ್ಯಾರ್ಥಿ ಸಂಘಟನೆ ಗದ್ದಲ ಎಬ್ಬಿಸಿದೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಒಟ್ಟಾರೆ, ಈ ಜಗಳದಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸರು ಈಗ ನಿಯೋಜನೆಗೊಂಡಿದ್ದಾರೆ.

Edited By :
PublicNext

PublicNext

11/04/2022 07:25 am

Cinque Terre

44 K

Cinque Terre

6

ಸಂಬಂಧಿತ ಸುದ್ದಿ