ಬಳ್ಳಾರಿ: ಗ್ರಾಮಕ್ಕೆ ಬಂದ ಮೊಸಳೆ ಹಿಡಿಯದಿದ್ದರೆ ಕೇಸ್ ಹಾಕೋದಾಗಿ ಹೇಳಿದ್ದ ಯುವಕನಿಗೆ ಜಿಲ್ಲಾಧಿಕಾರಿ ಪವನ್‌ಕುಮಾರ್ ಅವರು ಫೋನ್ ಮೂಲಕ ಚಳಿ ಬಿಡಿಸಿದ್ದಾರೆ.
ತಾಳೂರು ನಿವಾಸಿ ಅಮರೇಶ್ ಎಂಬಾತ ತಮ್ಮ ಗ್ರಾಮಕ್ಕೆ ನುಗ್ಗಿ ಉಪಟಳ ನೀಡುತ್ತಿರುವ ಮೊಸಳೆಯನ್ನು ಹಿಡಿಯದಿದ್ದರೆ ಕೇಸ್ ಹಾಕುತ್ತೇನೆ ಎಂಬುದಾಗಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಅವರಿಗೆ ವಾರ್ನಿಂಗ್ ಮಾಡುವ ರೀತಿಯಲ್ಲಿ ವಾಟ್ಸ್ಆ್ಯಾಪ್‌ನಲ್ಲಿ ಮೆಸೇಜ್ ಹಾಕಿದ್ದ. ಮೆಸೇಜ್ ನೋಡಿದ ಜಿಲ್ಲಾಧಿಕಾರಿಗಳು ಅಮರೇಶನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊಸಳೆ ಹಿಡಿಯದಿದ್ದರೆ ಮೊದಲು ನಿಮ್ಮ ಮೇಲೆ ಎಫ್ಐಆರ್ ಹಾಕ್ತೀನಿ. ಆಮೇಲೆ ಇಬ್ಬರು ತಹಶೀಲ್ದಾರ್ ಹಾಗೂ ವಲಯ ಅರಣ್ಯಾಧಿಕಾರಿಗಳ ಮೇಲೆ ಎಫ್ಐಆರ್ ಹಾಕ್ತೀನಿ ಎಂದು ಅಮರೇಶ್ ಜಿಲ್ಲಾಧಿಕಾರಿಗಳಿಗೆ ಮೆಸೇಜ್ ಹಾಕಿದ್ದ.
PublicNext
08/12/2021 05:53 pm