ಪಿಎಸ್ ಐ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಬಂಧನ ವಿಚಾರಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸಿಐಡಿ ಡಿಜಿ ಸಂಧು ಅವರಿಂದ ನಡೆದ ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಯಲಾಗಿದೆ. ಕೇವಲ ಸಿಸಿ ಟಿವಿ ಮತ್ತು ಆರೋಪಿಗಳ ಜೊತೆ ಸಂಪರ್ಕ ಹಾಗೂ ಹಣ ವರ್ಗಾವಣೆಯಿಂದಷ್ಟೇ ಅಮೃತ್ ಪಾಲ್ ಸಿಕ್ಕಾಕ್ಕೊಂಡಿಲ್ಲ. ಪಕ್ಕಾ ಟೆಕ್ನಿಕಲ್ ಮತ್ತು ಕಣ್ಮುಂದಿನ ಸಾಕ್ಷ್ಯ ಹಿನ್ನೆಲೆ ಎಡಿಜಿಪಿ ಲಾಕ್ ಆಗಿದ್ದಾರೆ.
ಎಡಿಜಿಪಿ ಅಮೃತ್ ಪಾಲ್ ಬಂಧನ ಹಿಂದಿದೆ ಅಲ್ಮೇರಾ ರಹಸ್ಯ. ಅಲ್ಮೇರಾದೊಳಗಿದ್ದ ಕೀ ಜಾಲದಿಂದಲೇ ಹಿರಿಯ ಅಧಿಕಾರಿ ಬಂಧನವಾಗಿದೆ. ಅಮೃತ್ ಪಾಲ್ ಚೇಂಬರ್ ಗೆ ಅನುಮತಿ ಪಡೆದೇ ಹೋಗಬೇಕಿತ್ತು. ಸ್ಟ್ರಾಂಗ್ ರೂಮ್ ನಲ್ಲಿದ್ದ ಎಲ್ಲಾ ಟ್ರಂಕ್ ಗಳಿಗೆ ಸ್ವತ: ಬೀಗ ಹಾಕಿ ತನ್ನ ಚೇಂಬರ್ ನ ಅಲ್ಮೇರಾದಲ್ಲಿಡಬೇಕಿತ್ತು. ಆದ್ರೆ, ತನ್ನ ಚೇಂಬರ್ ನಲ್ಲಿ ಎಲ್ಲಾ ರಹಸ್ಯ ಕಾರ್ಯಾಚರಣೆಗೆ ದಾರಿ ಮಾಡಿ ಕೊಟ್ಟಿದ್ರು ಪಾಲ್. ಅಲ್ಮೇರಾ ಜವಾಬ್ದಾರಿಯನ್ನು ಡಿವೈಎಸ್ ಪಿ ಶಾಂತ ಕುಮಾರ್, ಎಫ್ ಡಿಎ ಹರ್ಷಗೆ ವಹಿಸಿದ್ರು.
ಸ್ಟ್ರಾಂಗ್ ರೂಮ್ ಓಪನ್ ಮಾಡ್ಬೇಕಾದ್ರೆ ಖುದ್ದು ನೇಮಕಾತಿ ವಿಭಾಗ ಮುಖ್ಯಸ್ಥರೇ ಹೋಗ್ಬೇಕಿತ್ತು. ಆದ್ರೆ ಕಚೇರಿಗೆ ಅಮೃತ್ ಪಾಲ್ ಆಗಮಿಸ್ತಿದ್ದದ್ದೇ ತೀರಾ ಕಡಿಮೆ. ಇದೇ ವೇಳೆ ಚೇಂಬರ್ ಮತ್ತು ಸ್ಟ್ರಾಂಗ್ ರೂಮ್ ನಲ್ಲಿ ಡಿವೈಎಸ್ ಪಿ ಶಾಂತ್ ಕುಮಾರ್ , ಹರ್ಷ ದರ್ಬಾರ್ ನಡೆಸಿದ್ರು. ಕೇವಲ ಅಲ್ಮೇರಾ ರಹಸ್ಯ ಒಂದೇ ಅಲ್ಲಾ, ಥಮ್ ರಹಸ್ಯವೂ ಬಯಲು. ಸ್ಟ್ರಾಂಗ್ ರೂಮ್ ಗೆ ಅಮೃತ್ ಪಾಲ್ ಗೆ ಮಾತ್ರ ಥಮ್ ಇಂಪ್ರೆಷನ್ ಇರ್ಬೇಕಿತ್ತು. ಅವ್ರು ಥಂಬ್ ಮಾಡಿದ್ರೆ ಮಾತ್ರ ಸ್ಟ್ರಾಂಗ್ ರೂಮ್ ಓಪನ್ ಆಗುವುದು.
ಆದ್ರೆ, ಅಕ್ರಮ ನಡೆಸಲು ಅಮೃತ್ ಪಾಲ್ ಸೇರಿ 4 ಮಂದಿ ಅಧಿಕಾರಿಗಳಿಗೆ ಥಂಬ್ ಗೆ ಅನುಮತಿಯಿತ್ತು. ಡಿವೈಎಸ್ ಪಿ ಶಾಂತ ಕುಮಾರ್, ಹರ್ಷ, ಆರ್ ಎಸ್ ಐ ಮತ್ತು ಓರ್ವ ಸಿಬ್ಬಂದಿಗೆ ಅನುಮತಿಯಿತ್ತು. ಸ್ಟ್ರಾಂಗ್ ರೂಮ್ ನಲ್ಲಿ ಬಂಧಿತರು ಮುಂಜಾನೆ ಹಾಗೂ ರಾತ್ರಿ ವೇಳೆ ಒಎಮ್ ಆರ್ ಶೀಟ್ ತಿದ್ದುಪಡಿ ಮಾಡಿದ್ರು.
ಈ ಸಂದರ್ಭ ಪೋನ್ ಸಂಪರ್ಕದ ಕಾಲ್ ಡೀಟೆಲ್ಸ್ ಮತ್ತು ವಾಟ್ಸ್ ಅಪ್ ಕಾಲ್ ಮತ್ತು ಸಂದೇಶ ಪತ್ತೆ ಮಾಡಿತ್ತು ಸಿಐಡಿ.
ಈ ಸತ್ಯ ನಿದರ್ಶನಗಳ ಜೊತೆಗೆ ಬಂಧಿತ ಆರೋಪಿಗಳೂ ಸಹ ಅಮೃತ್ ಪಾಲ್ ಬಗ್ಗೆ ಹೇಳಿಕೆ ನೀಡಿದ್ರು. ಈ ಎಲ್ಲಾ ಟೆಕ್ನಿಕಲ್ ಮತ್ತು ಆರೋಪಿಗಳ ಸಾಕ್ಷ್ಯಾಧಾರ ಪರಿಗಣಿಸಿ ಅಮೃತ್ ಪಾಲ್ ಬಂಧನವಾಗಿದೆ.
PublicNext
05/07/2022 01:01 pm