ತುಮಕೂರು: ಉತ್ತಮ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಅವರ ಮೇಲಿರುತ್ತದೆ ಇಂತಹ ಶಿಕ್ಷಕರೇ ಹಾದಿ ತಪ್ಪಿದರೆ, ಮಕ್ಕಳ ಗತಿಯೇನು,ಪ್ರತೀ ದಿನ ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕಿಯ ಕರ್ಮಕಾಂಡ ಬಯಲಾಗಿದೆ.
ತುಮಕೂರು ತಾಲ್ಲೂಕು ಚಿಕ್ಕಸಾರಂಗಿ ಸರ್ಕಾರಿಶಾಲೆ ಶಿಕ್ಷಕಿ ಪ್ರತೀ ದಿನ ಎಣ್ಣೆ ಹೊಡೆದು ಶಾಲೆಗೆ ಬರುವುದರ ಜೊತೆಗೆ ಮಕ್ಕಳು ಹಾಗೂ ಸಹೋದ್ಯೋಗಿಗಳ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಸಾರ್ವಜನಿಕರು, ಪೋಷಕರ ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಶಿಕ್ಷಕಿಯ ಅಸಲೀ ಬಣ್ಣ ಬಯಲಾಗಿದೆ. ಅಸಲೀ ಬಣ್ಣ ಬಯಲಾಗುತ್ತಿದ್ದಂತೆ ಆತ್ಮಹತ್ಯೆಯ ನಾಟಕವಾಡಿ ಶಿಕ್ಷಕಿ ಹೈಡ್ರಾಮ ಮಾಡಿದ್ದಾರೆ.
PublicNext
08/09/2022 07:35 pm