ರಾಯ್‌ಪುರ: ಮದ್ಯ ಸೇವಿಸಿ ಶಾಲೆಗೆ ಬಂದ ಶಿಕ್ಷಕನೋರ್ವ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಛತ್ತೀಸ್‍ಗಢದ ಜಶ್‍ಪುರದಲ್ಲಿ ನಡೆದಿದೆ.
ಮಾರ್ಚ್ 10 ರಂದು ಜಶ್‍ಪುರದ ಶಾಲೆವೊಂದರಲ್ಲಿ ಶಿಕ್ಷಕ ದಿನೇಶ್ ಕುಮಾರ್ ಲಕ್ಷ್ಮೆ ಮದ್ಯ ಸೇವಿಸಿ ಶಾಲೆಗೆ ಬಂದಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ದಿನೇಶ್ ಶಾಲಾ ಆವರಣಕ್ಕೆ ಆಗಮಿಸುತ್ತಿದ್ದಂತೆಯೇ ಕ್ರಿಕೆಟ್ ಬ್ಯಾಟ್‍ನಿಂದ ಸುಮ್ಮನೆ ನಿಂತಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಶಿಕ್ಷಕ ದಿನೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿಗಳು ಶನಿವಾರ ಕೆಲಸದಿಂದ ಅಮಾನತುಗೊಳಿಸಿದ್ದಾರೆ.
PublicNext
13/03/2022 11:10 am