ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋಮ್‌ವರ್ಕ್ ಮಾಡದ ವಿದ್ಯಾರ್ಥಿಯನ್ನ ಶಿಕ್ಷಕ ಕೊಂದೇಬಿಟ್ಟ.!

ಜೈಪುರ್: ಹೋಮ್​ವರ್ಕ್​ ಮಾಡದ ಹಿನ್ನೆಲೆಯಲ್ಲಿ ಶಿಕ್ಷಕನಿಂದ ಹಲ್ಲೆಗೊಳಗಾದ ಏಳನೇ ತರಗತಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

ಚುರು ಜಿಲ್ಲೆಯ ಕೊಲಾಸಾರ್ ಗ್ರಾಮದ ಖಾಸಗಿ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೋಲಾಸಾರ್ ಗ್ರಾಮದ ನಿವಾಸಿ ಗಣೇಶ್ (13) ಮೃತ ದುರ್ದೈವಿ.

ಎಂದಿನಂತೆ ಗಣೇಶ್ ಬುಧವಾರ ಬೆಳಗ್ಗೆ ಶಾಲೆಗೆ ಹೋಗಿದ್ದ. ಆದರೆ ಹೋಮ್​ವರ್ಕ್ ಮಾಡದ ಹಿನ್ನೆಲೆಯಲ್ಲಿ ಶಿಕ್ಷಕ ಮನೋಜ್ ಗಣೇಶ್‌ನನ್ನು ನೆಲಕ್ಕೆ ಹಾಕಿ ಒದ್ದು, ಮುಷ್ಟಿಕಟ್ಟಿ ಹೊಡೆದಿದ್ದಾನೆ. ಇದರಿಂದಾಗಿ ಬಾಲಕನ ಮೂಗಿನಿಂದ ರಕ್ತ ಬರಲಾರಂಭಿಸಿದೆ. ಬಳಿಕ ಆತ ಮೂರ್ಛೆ ಹೋಗಿದ್ದಾನೆ. ಮಗುವಿಗೆ ಪ್ರಜ್ಞೆ ಮರಳದಿದ್ದಾಗ, ಆರೋಪಿತ ಶಿಕ್ಷಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾಗಿ ಎಂದು ತಿಳಿಸಿದ್ದಾರೆ.

ಗಣೇಶ್ ತಂದೆಯ ದೂರಿನ ಮೇರೆಗೆ ಶಿಕ್ಷಕ ಮನೋಜ್ ವಿರುದ್ಧ ಸಲಸಾರ್ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

Edited By : Vijay Kumar
PublicNext

PublicNext

21/10/2021 10:26 am

Cinque Terre

60.39 K

Cinque Terre

10

ಸಂಬಂಧಿತ ಸುದ್ದಿ