ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡು: ನೀಟ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

ಚೆನ್ನೈ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆದ ಒಂದು ದಿನದ ನಂತರ ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ಸೋಮವಾರ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವಿದ್ಯಾರ್ಥಿನಿಯು ನಾಮಕ್ಕಲ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ ಮತ್ತು ರಾಜ್ಯ ಮಂಡಳಿಯು ನಡೆಸಿದ ತನ್ನ 12 ನೇ ತರಗತಿಯ ಪರೀಕ್ಷೆಯಲ್ಲಿ 600ಕ್ಕೆ 562 ಅಂಕಗಳನ್ನು ಗಳಿಸಿದ್ದಳು. ಆಕೆಯ ತಂದೆ ತಮಿಳುನಾಡಿನ ಬಾರ್ ಕೌನ್ಸಿಲ್ ಸದಸ್ಯರಾಗಿದ್ದರು ಮತ್ತು ಅರಿಯಲೂರಿನ ಜಯಕೊಂಡಂ ನ್ಯಾಯಾಲಯದಲ್ಲಿ ವಕೀಲರಾಗಿದ್ದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.

ನೀಟ್ ಪರೀಕ್ಷೆಯ ಕೆಲವೇ ಗಂಟೆಗಳಿಗೆ ಮುನ್ನ ಸೇಲಂನಲ್ಲಿ 19ರ ಹರೆಯದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ನಂತರ ಅಂದರೆ ಸೋಮವಾರ ತಮಿಳುನಾಡು ವಿಧಾನಸಭೆ ನೀಟ್ ಪರೀಕ್ಷೆಯಿಂದ ಶಾಶ್ವತ ವಿನಾಯಿತಿ ಕೋರುವ ಮಸೂದೆಯನ್ನು ಅಂಗೀಕರಿಸಿತ್ತು.

Edited By : Vijay Kumar
PublicNext

PublicNext

15/09/2021 05:10 pm

Cinque Terre

54.18 K

Cinque Terre

2

ಸಂಬಂಧಿತ ಸುದ್ದಿ