ಬೆಂಗಳೂರು : ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಮತ್ತಷ್ಟು ನಟ ನಟಿಯರಿಗೆ ಬುಲಾವ್ ಬರುವ ಸಾಧ್ಯತೆಯಿದ್ದು ಈ ಜಾಲ ವಿಸ್ತರಿಸುತ್ತಲಿದೆ.
ಈ ನಡುವೆ ಇಂದು ಸಿಸಿಬಿ ಅಧಿಕಾರಿಗಳು ಚಿತ್ರನಟ ಸಂತೋಷ್ ಆರ್ಯನ್, ಅಕುಲ್ ಬಾಲಾಜಿ ಹಾಗೂ ಪಾಲಿಕೆಯ ಮಾಜಿ ಸದಸ್ಯ ಆರ್. ವಿ. ಯುವರಾಜ್ ವಿಚಾರಣೆಗೆ ಬರಲು ಸೂಚಿಸಿತ್ತು. ಈ ಮೂವರು ಸಮಯಕ್ಕಿಂತ ಮೊದಲೇ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದಿದ್ದಾರೆ. ಯುವರಾಜ ಎಲ್ಲರಿಗಿಂತ ಮೊದಲೇ ಬಂದಿದ್ದು ಆ ಸಮಯ ಸಿಸಿಬಿ ಕಚೇರಿಯಲ್ಲಿ ಆಗ ಸೆಂಟ್ರಿ ಮಾತ್ರವೇ ಇದ್ದು ಆತ ಮನೆಯಲ್ಲೇ ಇದ್ದ ಅಧಿಕಾರಿಗಳಿಗೆ ಫೋನಾಯಿಸಿ ನಿಮ್ಮನ್ನು ಕೇಳ್ಕಂಡು ಯಾರೋ ಬಂದಿದ್ದಾರೆ ಎಂದು ತಿಳಿಸಿದ ಸಂಗತಿ ನಡೆದಿದೆ.
ಸಿಸಿಬಿ ಅಧಿಕಾರಿ ಸರಿ ಆತನನ್ನು ಮಹಡಿಯಲ್ಲಿ ಕೂಡಿಸು ನಾವು ಬಂದು ವಿಚಾರಿಸುತ್ತೆವೆ ಎಂದಿದ್ದಾರೆ.
ಮಾಜಿ ಶಾಸಕ ಆರ್.ವಿ ದೇವರಾಜ್ ಮಗ ಹಾಗೂ ಪಾಲಿಕೆ ಮಾಜಿ ಸದಸ್ಯರಾಗಿರುವ ಅರೆ.ವಿ ಯುವರಾಜ್ಗೂ ಹಾಗೂ ಪ್ರಕರಣದ 5 ನೇ ಆರೋಪಿ ವೈಭವ್ ಜೈನ್ ಜೊತೆ ನಂಟು ಇರುವ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಅರ್.ವಿ. ಯುವರಾಜ್ ಮತ್ತು ಅವರ ಸ್ನೇಹಿತರ ಪಾರ್ಟಿಗಳಲ್ಲಿ ವೈಭವ್ ಜೈನ್ ಭಾಗಿಯಾಗುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ನಗರದ ಹೊರಗಿನ ಜಾಗಗಳಲ್ಲಿ ಪಾರ್ಟಿ ಮಾಡಿರುವ ಮಾಹಿತಿ ಸಿಕ್ಕಿದ್ದು ಬಂಧಿತ ಆರೋಪಿಗಳ ಜೊತೆ ಅರ್.ವಿ. ಯುವರಾಜ್ ಹಲವಾರು ಬಾರಿ ಫೋನ್ ಮೂಲಕ ಸಂಭಾಷಣೆ ಮಾಡಿದ್ದು ಡಿಟೇಲ್ಸ ಸಿಕ್ಕಿವೆ. ಈ ಆಧಾರದ ಮೇಲೆ ಯುವರಾಜನಿಗೆ ಸಿಸಿಬಿ ಅಧಿಕಾರಿಗಳ ನೋಟಿಸ್ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ಇತ್ತ ಚಿತ್ರನಟ ಸಂತೋಷ್ ಸಹ ಕುಮಾರ್ ಅಧಿಕಾರಿಗಳು ಕಚೇರಿಗೆ ಆಗಮಿಸುವ ಮುನ್ನವೇ ತಾವು ಬಂದಿದ್ದಾರೆ.
ಈ ಬಗ್ಗೆ ಸಂತೋಷ್ ಮಾತನಾಡಿ ನನಗೆ ವೈಭವ್ ಜೈನ್ ಪರಿಚಯ ಇದ್ದ ಕಾರಣಕ್ಕೆ ಕರೆದಿರಬಹುದು. ಅವನು ಈ ಥರ ಅಂತಾ ಗೊತ್ತಿದ್ರೆ ಅವನ ಕಪಾಳಕ್ಕೆ ಹೊಡೀತಿದ್ದೆ. ವೈಭವ್ ಜೈನ್ ಎರಡು ಮಕ್ಕಳ ತಂದೆ. ಯಲಹಂಕದಲ್ಲಿರುವ ನನ್ನ ಜಿ.ಡಿ ಗಾರ್ಡನ್ ವಿಲ್ಲಾವನ್ನು ವೈಭವ್ ಜೈನ್ ನೋಡಿಕೊಳ್ತಿದ್ದ ಎಂಬ ಮಾಹಿತಿ ನೀಡಿದ್ದಾರೆ. ಜೊತೆಗೆ, ವೈಭವ್ಗೂ ನನಗೂ ಜಗಳ ಸಹ ಆಗಿತ್ತು ಎಂದು ಹೇಳಿದ ಸಂತೋಷ್ ಜನವರಿ 14ರಂದೇ ಆತನ ಜೊತೆ ನಾನು ಸಂಪರ್ಕ ಕೈಬಿಟ್ಟಿದ್ದೇನೆ. ಅವನು ಡ್ರಗ್ ಪೆಡ್ಲರ್ ಅಥವಾ ಮತ್ತಿನ್ನೇನೆಂದು ಗೊತ್ತಿಲ್ಲ. ಸಂಜನಾ ಬರ್ತ್ಡೇ ಪಾರ್ಟಿಯಲ್ಲಿ ರಾಹುಲ್ ಪರಿಚಯವಾದ. ಸಹಜವಾಗಿಯೇ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದ ಎಂಬ ಮಾಹಿತಿ ತಿಳಿಸಿದ್ದಾರೆ.
ಇತ್ತ ಹೈದರಾಬಾದ್ಗೆ ಹೋಗಿದ್ದಅಕುಲ್ ಬಾಲಾಜಿ ಸಹ ಕಚೇರಿಗೆ ಆಗಮಿಸಿ ಸಿಸಿಬಿ ಕಚೇರಿಗೆ ಆಗಮಿಸಿದ ನಿರೂಪಕ ಅಕುಲ್ ಬಾಲಾಜಿ ನಾನು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದೇನೆ. ಸಿಸಿಬಿಗೆ ನನ್ನಿಂದ ಆಗುವ ಎಲ್ಲ ಸಹಕಾರವನ್ನು ನೀಡುತ್ತೇನೆ. ಸಿಸಿಬಿ ಪ್ರಶ್ನೆಗಳಿಗೆ ಅಚ್ಚುಕಟ್ಟಾಗಿ ಉತ್ತರಿಸುತ್ತೇನೆ. ವೈಭವ್ ಜೈನ್ ನನಗೆ ಹಾಯ್ ಬಾಯ್ ಪರಿಚಯವಷ್ಟೇ ಎಂದು ಹೇಳಿದ್ದಾರೆ. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅಕುಲ್ ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
PublicNext
19/09/2020 11:59 am