ಮುಂಬೈ: 2 ವಾರಗಳ ಹಿಂದಷ್ಟೇ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ್ದ ಯುವ ನಟಿಯ ಶವ ಹೋಟೆಲ್ ರೂಮ್ನಲ್ಲಿ ಪತ್ತೆಯಾಗಿದೆ.
ಹೌದು ‘9 ಥಿರುದರ್ಗಳ್’ ಹೆಸರಿ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಕಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮತ್ತು ಕೆಲವು ಹಿಂದಿ ಸಿನಿಮಾಗಳು ಸೇರಿದಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರೀಯಳಾಗಿದ್ದ ನಟಿ ಆಕಾಂಕ್ಷಾ ಮೋಹನ್ (30), ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ಕೋಣೆಯೊಂದರಲ್ಲಿ ಸೆ.30ರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ 30 ವರ್ಷದ ಆಕಾಂಕ್ಷಾ ಬುಧವಾರ (ಸೆ.28) ಬೆಳಗ್ಗೆ ಹೋಟೆಲ್ ಗೆ ಆಗಮಿಸಿ, ರೂಮ್ ಪಡೆದು ಅಲ್ಲಿಯೇ ಕೆಲ ದಿನಗಳವರೆಗೆ ತಂಗಲು ಮುಂದಾಗಿದ್ದರು. ಆದರೆ, ಎರಡು ದಿನಗಳ ಬಳಿಕ ಅಂದರೆ, ಸೆ.30ರಂದು ಹೋಟೆಲ್ ಸಿಬ್ಬಂದಿ, ಆಕಾಂಕ್ಷಾ ಅವರಿದ್ದ ಕೋಣೆಯ ಬಾಗಿಲನ್ನು ಎಷ್ಟೇ ಬಡಿದರು, ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮತ್ತೊಂದು ನಕಲಿ ಕೀ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಆಕಾಂಕ್ಷಾ ಶವವಾಗಿ ಪತ್ತೆಯಾಗಿದ್ದಾರೆ.
ಆಕಾಂಕ್ಷಾ ಕೋಣೆಯಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದ್ದು, ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಸಂತೋಷವಾಗಿಲ್ಲ. ನನಗೆ ನೆಮ್ಮದಿ ಬೇಕಿದೆ ಎಂದು ಬರೆದಿಟ್ಟು, ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
PublicNext
01/10/2022 03:17 pm