ಬೆಂಗಳೂರು: ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಗುಣರಂಜನ್ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನುವ ಶಾಕಿಂಗ್ ವಿಚಾರ ಬಹಿರಂಗವಾಗಿದೆ. ಈ ಸಂಬಂಧ ಜಯಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದ್ದಾರೆ.ಗುಣರಂಜನ್ ಶೆಟ್ಟಿ ಅವರು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರಾಗಿದ್ದಾರೆ.
ಗುಣರಂಜನ್ ಶೆಟ್ಟಿ ಮತ್ತು ಇನ್ನೋರ್ವ ಕಾರ್ಯಕರ್ತ ಮನ್ಮಿತ್ ರೈ ಇಬ್ಬರೂ ಮುತ್ತಪ್ಪ ರೈ ಜತೆ ಇದ್ದರು. ಮುತ್ತಪ್ಪ ರೈ ನಿಧನದ ಬಳಿಕ ಮನ್ಮಿತ್ ರೈ ದೂರ ಆಗಿದ್ದರು. ಇದೀಗ ಗುಣರಂಜನ್ ಶೆಟ್ಟಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಈ ಮೂಲಕ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ದಿವಂಗತ ಮುತ್ತಪ್ಪ ರೈ ಅಪ್ತ ಬಳಗದಲ್ಲಿ ಮತ್ತೆ ಕೋಲ್ಡ್ ವಾರ್ ಆರಂಭವಾಗಿದೆಯೇ ಎಂಬ ಬಗ್ಗೆ ಸಂದೇಹ ಶುರುವಾಗಿದೆ.
PublicNext
12/06/2022 02:23 pm