ಮುಂಬೈ: ಬಾಲಿವುಡ್‌ನ ಧೂಮ್ ಚಿತ್ರದ ಸ್ವೀಟಿ ದಿಕ್ಷೀತ್ ಪಾತ್ರಧಾರಿ ನಟಿ ರಿಮಿ ಸೇನ್ ಈಗ ಮೋಸ ಹೋಗಿದ್ದಾರೆ. ಜಿಮ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನ ನಂಬಿ ಬರೋಬ್ಬರಿ 4.4 ಕೋಟಿ ರೂಪಾಯಿ ಕಳೆದುಕೊಂಡು ಪೇಚಾಡುತ್ತಿದ್ದಾರೆ.
ಹೌದು. ಈ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ. ನಟಿ ರಿಮಿ ಸೇನ್ ಮೋಸಕ್ಕೆ ಒಳಗಾಗಿದ್ದಾರೆ. ಜಿಮ್ ನಲ್ಲಿ ಪರಿಚಯ ಆಗಿದ್ದ ರೋಣಕ್ ಜಟಿನ್ ಹೆಸರಿನ ವ್ಯಕ್ತಿಯನ್ನ ನಟಿ ರಿಮಿ ನಂಬಿದ್ದಾಳೆ. ಆತ ಹೇಳಿದಂತೆ ಎಲ್ಲವನ್ನೂ ಮಾಡಿದ್ದಾಳೆ. ಆದರೆ ಈ ರೋಣಕ್ ಈ ನಟಿಗೆ ಮಗಹಾ ಮೋಸ ಮಾಡಿ ಹೋಗಿದ್ದಾನಂತೆ.
ಕಿಲಾಡಿ ರೋಣಕ್ ನಟಿಗೆ ಸರಿಯಾಗಿಯೇ ನಂಬಿಸಿದ್ದಾನೆ. ಎಲ್‌ಇಡಿ ಬಲ್ಪ್ ವ್ಯವಹಾರ ನಡೆಸುತ್ತೇನೆ. ಈ ವ್ಯವಹಾರದಲ್ಲಿ ಭಾರಿ ಲಾಭವೂ ಇದೆ. ಇದರಲ್ಲಿ ಹೂಡಿಕೆ ಮಾಡಿದರೆ, ಶೇಕಡ 40 ರಷ್ಟು ರಿಟರ್ಸ್ ಬರುತ್ತದೆ ಅಂತಲೇ ನಂಬಿಸಿದ್ದಾನೆ. ಆಸೆಗೆ ಬಿದ್ದ ನಟಿ ರಿಮಿ ಸೇನ್ ವ್ಯವಹಾರದಲ್ಲಿ 4.4 ಕೋಟಿ ಹೂಡಿದ್ದರಂತೆ.
ಆದರೆ ಈಗ ಆತನೂ ಇಲ್ಲ. ಲಾಭವೂ ಇಲ್ಲ. ಹಣವೂ ಇಲ್ಲ. ರೋಣಕ್ ಪರಾರಿ ಆಗಿದ್ದಾನೆ. ಈ ಬಗ್ಗೆ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ. ತನಿಖೆಯನ್ನೂ ಮುಂದುವರೆಸಿದ್ದಾರೆ. ಈಗಾಗಲೇ ರೋಣಕ್ ಯಾವುದೇ ಉದ್ಯಮವನ್ನೂ ಹೊಂದಿಲ್ಲ ಅನ್ನೋ ವಿಚಾರವೂ ಈಗಾಗಲೇ ಹೊರ ಬಿದ್ದಿದೆ.
PublicNext
02/04/2022 02:17 pm