ನವದೆಹಲಿ: ದೆಹಲಿ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಸೇರಿಸಿದ್ದ ಪ್ರಕರಣದ ಆರೋಪಿ, ನಟ ದೀಪ್ ಸಿಧು ದುರ್ಮರಣದ ಸುತ್ತ ಅನುಮಾನಗಳು ಮೂಡುತ್ತಿವೆ.
ಕೆಂಪುಕೋಟೆ ಹಿಂಸಾಚಾರದಲ್ಲಿ ಸಿಕ್ಕಿಬಿದ್ದಿದ್ದೇ ಸಿಧು ಸಾವಿಗೆ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಇದು ಸುಳ್ಳು ಆರೋಪ. ಸಿಧು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ಅಪಘಾತದ ವೇಳೆ ಸಿಧು ಜತೆ ಕಾರಿನಲ್ಲಿದ್ದ ಹಾಗೂ ಏರ್‌ಬ್ಯಾಗ್ ನೆರವಿನಿಂದ ಬದುಕುಳಿದ ಸಿಧು ಗರ್ಲ್ಫ್ರೆಂಡ್ ರೀನಾ ರಾಯ್ ನಿನ್ನೆ ಇನ್ಸ್ಟಾಗ್ರಾಂನಲ್ಲಿ ಭಾವುಕ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಆದರೆ ಈಗ ಅವರು ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಪೋಸ್ಟ್‌ನಲ್ಲಿ ಏನಿತ್ತು?
"ನಾನು ಕೂಡ ಕುಂದಿ ಹೋಗಿದ್ದೇನೆ. ನನ್ನೊಳಗೆ ನಾನು ಸಹ ಸತ್ತಿದ್ದೇನೆ. ಜೀವಿತಾವಧಿಯಲ್ಲಿ ಎಂದಿಗೂ ನಿನ್ನನ್ನು ಬಿಡುವುದಿಲ್ಲ ಎಂದು ನನಗೆ ಭರವಸೆ ನೀಡಿದ್ದೀರಿ, ದಯವಿಟ್ಟು ನಿಮ್ಮ ಸಂಗಾತಿಯ ಬಳಿಗೆ ಹಿಂತಿರುಗಿ, ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನನ್ನ ಪ್ರೀತಿಯ ಹುಡುಗ ನೀನು. ನನ್ನ ಹೃದಯ ಬಡಿತ ನೀನು. ನಾನಿಂದು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದೆ. ನೀನು ಬಂದು ನನ್ನ ಕಿವಿಯಲ್ಲಿ ಐ ಲವ್ ಯು ಜಾನ್ ಎಂದು ಪಿಸುಗುಟ್ಟಿದ್ದು ಕೇಳಿದೆ. ನನಗೆ ಗೊತ್ತು ನೀವು ಯಾವಾಗಲು ನನ್ನ ಜತೆಯಲ್ಲಿ ಇರುತ್ತೀಯ. ನಮ್ಮ ಭವಿಷ್ಯವನ್ನು ನಾವು ಒಟ್ಟಿಗೆ ಯೋಜಿಸುತ್ತಿದ್ದೆವು. ಆದರೆ, ಈಗ ನೀವು ನನ್ನನ್ನು ಬಿಟ್ಟು ಹೋಗಿದ್ದೀರಿ. ನಾವಿಬ್ಬರು ಒಬ್ಬರನ್ನೊಬ್ಬರು ಬಿಡುವುದಿಲ್ಲ ಮತ್ತು ನಾನು ನಿಮ್ಮನ್ನು ಇನ್ನೊಂದು ಬದಿಯಲ್ಲಿ ನೋಡುತ್ತೇನೆ' ಎಂದು ರೀನಾ ಬರೆದುಕೊಂಡಿದ್ದರು.
PublicNext
18/02/2022 06:54 pm