ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆ ಒಂದು ಕರಾಳ ಘಟನೆ: ಕೊನೆಗೂ ಮೌನ ಮುರಿದ ತಮಿಳು ನಟಿ ಭಾವನಾ ಮೆನನ್

ಚೆನ್ನೈ:ಬಹು ಭಾಷಾ ನಟಿ ಭಾವನಾ ಮೆನನ್ ಈಗ ಮೌನ ಮುರಿದ್ದಾರೆ. ಚೆನ್ನೈನಲ್ಲಿ ಹೆಚ್ಚು ಕಡಿಮೆ ಐದು ವರ್ಷದ ಹಿಂದೆ ನಡೆದ ಆ ಘಟನೆ ಬಗ್ಗೆ ಎಲ್ಲೂ ಹೇಳುವ ಹಾಗೂ ಇರಲಿಲ್ಲ. ಹೆಸರನಂತೂ ಬಳಸೋ ಹಾಗೇ ಇರಲಿಲ್ಲ. ಆದರೆ ಈಗ ಸ್ವತಃ ನಟಿ ಭಾವನಾ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಹೌದು ಐದು ವರ್ಷದ ಹಿಂದೆ ಪುಂಡರ ಗುಂಪೊಂದು ನಟಿ ಭಾವನಾರನ್ನ ಅಪಹರಿಸಿತ್ತು.ಲೈಂಗಿಕ ದೌರ್ಜನ್ಯವನ್ನೂ ಎಸಗಿತ್ತು ಎನ್ನಲಾಗಿದೆ. ಈ ವಿಷಯದಲ್ಲಿ ಮಲೆಯಾಳಂ ನಟ ದಿಲೀಪ್ ಅರೆಸ್ಟ್ ಆಗಿದ್ದರು. ಈಗ ಜಾಮೀನಿನ ಮೇಲೂ ಹೊರ ಬಂದಿದ್ದಾರೆ.

ಈ ಕರಾಳ ಘಟನೆಯಿಂದ ಜರ್ಜರಿತೊಂಡಿದ್ದ ಭಾವನಾ ಎಲ್ಲೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಷಯಗಳನ್ನ ಬರೆದುಕೊಂಡಿದ್ದಾರೆ.

ಒಬ್ಬ ಸಂತ್ರಸ್ಥೆಯಾಗಿ ಬದುಕುಳಿಯುದು ಅಷ್ಟು ಸುಲಭವಲ್ಲ. ನನ್ನ ಧ್ವನಿಯನ್ನೂ ಆಗ ಮಟ್ಟಹಾಕುವ ಪ್ರಯತ್ನ ನಡೆಯಿತು.ಆದರೆ ಈಗ ನನ್ನ ಬೆಂಬಲಕ್ಕೆ ಸಾಕಷ್ಟು ಜನ ಇದ್ದಾರೆ. ಅನ್ಯಾಯ ಮಾಡಿದವರಿಗೆ ಶಿಕ್ಷೆ ಆಗುವುದನ್ನ ನಾನು ನೋಡಲೆಂದೇ, ಇಂತಹ ಅಗ್ನಿಪರೀಕ್ಷೆ ಮತ್ಯಾರಿಗೂ ಆಗದಿರಲೆಂದೇ ನಾನು ನನ್ನ ಜರ್ನಿಯನ್ನ ಮುಂದುವರೆಸಿದ್ದೇನೆ ಅಂತಲೇ ಬರೆದುಕೊಂಡಿದ್ದಾರೆ.

ಇದು ಭಾವನಾ ನೋವಿನ ಮಾತು. ಇದನ್ನ ಇಂಗ್ಲೀಷ್ ನಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದರ ಅನುವಾದ ಮಾತ್ರ ಇಲ್ಲಿದೆ.

ಈ ಎಲ್ಲ ಘಟನೆ ಬಳಿಕ ಭಾವನಾಗೆ ಇಂಡಸ್ಟ್ರೀಯಲ್ಲಿ ಅವಕಾಶಗಳೇ ಕಡಿಮೆ ಆದರು. ಆದರೂ ಭಯಪಡದೇ ಭಾವನಾ, ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟರು. ಇಲ್ಲಿ ಇವರಿಗೆ ಭವ್ಯ ಸ್ವಾಗತವೇ ಸಿಕ್ಕಿತು. ನೆಚ್ಚಿನ ಗೆಳೆಯ ನಟ-ನಿರ್ಮಾಪಕ ನವೀನ್ ರನ್ನ ಭಾವನಾ ಮದುವೆ ಆಗಿದ್ದಾರೆ. ಬೆಂಗಳೂರಿನಲ್ಲಿಯೇ ಈಗ ಸೆಟ್ಲ್ ಆಗಿದ್ದಾರೆ.

Edited By :
PublicNext

PublicNext

11/01/2022 11:56 am

Cinque Terre

83.25 K

Cinque Terre

1