ಏನಕೇನ ಪ್ರಕಾರೇಣ ಸದಾ ಸುದ್ದಿಯಲ್ಲಿರುವ ಕನ್ನಡ ಚಿತ್ರ ತಾರೆ ಸಂಜನಾ ಗಲ್ರಾನಿ, ಈಗ ಟಿವಿ ಮಾಧ್ಯಮದ ವೆಬ್ ಮುಖ್ಯಸ್ಥೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಆಡಿಯೊ ಸದ್ದು ಮಾಡತೊಡಗಿದೆ.
" ಕನ್ನಡ ಚಿತ್ರರಂಗದ ವಿವಾದಾತ್ಮಕ ತಾರೆ ಸಂಜನಾ ಗಲ್ರಾನಿ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಲಿದ್ದಾರೆ, ತಾಯಿ ಆಗಲಿದ್ದಾರೆ, ಮೇ ತಿಂಗಳಲ್ಲಿ ಹೊಸ ಅತಿಥಿ ಮನೆಗೆ ಬರಲಿದ್ದಾರೆ ಎಂದು ತನ್ನ ವೆಬ್ ಸೈಟ್ ದಲ್ಲಿ ಟಿವಿ ಚಾನಲ್ ಪ್ರಕಟ ಮಾಡಿತ್ತು. ಮುಂದುರೆದು, ಡ್ರಗ್ ಪ್ರಕರಣದಲ್ಲಿ ಸಂಜನಾ ಹಾಗೂ ಅವರ ಪತಿ ನಡುವೆ ಡೈವರ್ಸ ಸುದ್ದಿಯೂ ಹರಿದಾಡಿತ್ತು'' ಎಂದು ಪ್ರಕಟಿಸಿತ್ತು.
ಆದರೆ ಇದೆಲ್ಲವೂ ಸುಳ್ಳು ತಾನು ಮಾಡಿದ್ದು ತಪ್ಪು ಎಂದು ಗೊತ್ತಾಗುತ್ತಲೆ ಟಿವಿ ಮಾಧ್ಯ ವೆಬ್ ಅದನ್ನು ಡಿಲೀಟ್ ಮಾಡಿತ್ತು. ಅಷ್ಟರಲ್ಲಿಯೇ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ ತಾರೆ ಸಂಜನಾ, ವೆಬ್ ಮುಖ್ಯಸ್ಥೆ ಬೆವರಿಳಿಸಿದ್ದಾಳೆ.
PublicNext
02/01/2022 02:23 pm