ಮುಂಬೈ: ಬಾಲಿವುಡ್ ನಾಯಕ ನಟಿ ಜಾಕ್ವಲಿನ್ ಫರ್ನಾಂಡಿಸ್ ಪಡೆದಿದ್ದ ಉಡುಗೊರೆ ಪಡೆದು ಪೇಚಿಗೆ ಸಿಲುಕಿದ್ದಾರೆ. ಒಂದು ರೀತಿ ನುಂಗಲಾರದ ತುಪ್ಪದಂತಹ ಪರಿಸ್ಥಿತಿಯಲ್ಲಿಯೆ ಜಾಕ್ವಲಿನ್ ಇದ್ದಾರೆ. ಇದಕ್ಕೆ ಕಾರಣ ಸುಳ್ಳುಗಾರ ಸುಕೇಶ್ ಚಂದ್ರಶೇಖರ್. ಈತನ ಕಹಾನಿ ಖತರ್ನಾಕ್ ಆಗಿಯೇ ಇದೆ.
ಸುಖೇಶ್ ಚಂದ್ರಶೇಖರ್ ಮಧ್ಯಮ ವರ್ಗದ ಹುಡುಗು. ಕಾಲೇಜ್ ಡ್ರಾಪ್ ಔಟ್ ಬೇರೆ.17-18 ನೇ ವಯಸ್ಸಿನಲ್ಲಿಯೇ ವಂಚನೆ ಆರಂಭಿಸಿದ್ದ ಖತರ್ನಾಕ್ ವ್ಯಕ್ತಿ.2017 ರಲ್ಲಿಯೇ ಒಮ್ಮೆ ಪೊಲೀಸರು ಈತನನ್ನ ಬಂಧಿಸಿ ಜೈಲಿಗೂ ಅಟ್ಟಿದ್ದರು. ಆದರೆ ಅಲ್ಲಿಂದ ಬಂದ್ಮೇಲೆ ಈತ ಕೃತ್ಯ ಹೆಚ್ಚಾಗಿದೆ.
ಇದರಲ್ಲಿ ಬಲಿಯಾದವರ ಪಟ್ಟಿಯಲ್ಲಿ ನಟಿ ಜಾಕ್ವಲಿನ್ ಫರ್ನಾಂಡಿಸ್ ಕೂಡ ಒಬ್ಬರು.ದಿವಂಗತ ಜಯಲಲಿತಾ ಕುಟುಂಬದ ಸದಸ್ಯ ಎಂದೇ ಜಾಕ್ವಲಿನ್ ಗೆ ಪರಿಚಯಿಸಿಕೊಂಡಿದ್ದಾನೆ. ಅಷ್ಟೇ ಯಾಕೆ ? ತನ್ನ ಮೂಲ ಹೆಸರು ಹೇಳದೇ ತನ್ನ ಹೆಸರು ರತ್ನ ವೇಲಾ ಅಂತಲೇ ಜಾಕ್ವಲಿನ್ ಗೆ ಪರಿಚಯಸಿಕೊಂಡಿದ್ದ.
ಮೇಕ್‌ಅಪ್ ಆರ್ಟಿಸ್ಟ್ ಶಾನ್ ಮುತ್ತ್ ಹಿಲ್ ಮೂಲಕವೇ ಜಾಕ್ವಲಿನ್ ಗೆಳೆತನ ಸಂಪಾದಿಸಿದ್ದ.ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಾಕಷ್ಟು ಆಫರ್ ಕೊಡೊಸೋದಾಗಿಯೂ ಹೇಳಿದ್ದನಂತೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿಯ ಹೆಸರು ಹೇಳಿಯೂ ಜಾಕ್ವಲಿನ್ ಫರ್ನಾಂಡಿಸ್ ಸಂಪರ್ಕ ಸಾಧಿಸಿದ್ದನಂತೆ ಈ ಸುಖೇಶ್ ಚಂದ್ರಶೇಖರ್.
ಗೆಳೆತನ ಬೆಳೆಸಿಕೊಂಡು ಜಾಕ್ವಲಿನ್ ಗೆ ದುಬಾರಿ ಗಿಫ್ಟ್‌ಗಳನ್ನೇ ಕೊಟ್ಟಿದ್ದನಂತೆ. ಹೀಗೆ ಮತ್ತೋರ್ವ ಬಾಲಿವುಡ್‌ನ ನಟಿ ನೂರಾ ಫತೇಹಿ ಕೂಡ ಸುಖೇಶ್ ಜಾಲಕ್ಕೆ ಬಿದ್ದು ಬಿಎಂಡಬ್ಲು ಕಾರ್ ಗಿಫ್ಟ್ ಪಡೆದ್ದಾಳೆ.
PublicNext
18/12/2021 04:23 pm