ಕೋಲ್ಕತ್ತ: ರಾಷ್ಟ್ರ ಮಟ್ಟದ ಶೂಟರ್ ಆಗಿದ್ದ ಕೋನಿಕಾ ನಾಯಕ್ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.
ಬಂಗಾಳದ ಬಾಲಿ ಹಾಸ್ಟೆಲ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು ಅದರಲ್ಲಿ ಖಿನ್ನತೆಯೇ ನನ್ನ ಸಾವಿಗೆ ಕಾರಣ ಎಂಬರ್ಥದ ಅಂಶಗಳಿವೆ. ಈ ಡೆತ್ ನೋಟ್ ಕೋನಿಕಾ ಅವರೇ ಬರೆದಿದ್ದಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದ ಕೋನಿಕಾ ಇದಾಗಲೇ ಹಲವಾರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದ ಇವರ ಸಾಧನೆ ಗಮನಿಸಿದ್ದ ಬಾಲಿವುಡ್ ನಟ ಸೋನು ಸೂದ್ ಜರ್ಮನಿಯಲಿ ತಯಾರಿಸಿದ್ದ ರೈಫಲ್‌ಅನ್ನು ಗಿಫ್ಟ್ ಕೊಟ್ಟಿದ್ದರು. ಇದಕ್ಕಾಗಿ ಥ್ಯಾಂಕ್ಸ್ ಹೇಳಿದ್ದ ಕೋನಿಕಾ 'ಸೂದ್ ಸರ್ ನೀವು ಕೊಟ್ಟ ರೈಫಲ್ ಇಲ್ಲಿದೆ, ನೀವು ಇದನ್ನು ಕೊಟ್ಟಿದ್ದಕ್ಕೆ ನನ್ನ ಕುಟುಂಬದಲ್ಲಿ ಸಂತಸ ಮೂಡಿದೆ. ನಮ್ಮ ಊರಿನವರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ನೀವು ನೂರ್ಕಾಲ ಸುಖವಾಗಿ ಬಾಳಿ' ಎಂದು ಟ್ವೀಟ್ ಮಾಡಿದ್ದರು.
ಹೀಗೆ ಉತ್ಸಾಹದಿಂದ ಇದ್ದ ಕೋನಿಕಾ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
PublicNext
17/12/2021 03:55 pm