ತಿರುವನಂತಪುರಂ: ಕೇರಳದ ನಟಿ ಪ್ರವೀಣಾ ಅವರ ಫೋಟೋವನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸದ್ಯ ಈ ಪ್ರಕರಣದ ಮತ್ತೋರ್ವ ಆರೋಪಿಯನ್ನು ಕೇರಳ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ಭಾಗ್ಯರಾಜ್ (22) ಬಂಧಿತ ಆರೋಪಿ. ಇದಕ್ಕೂ ಮುನ್ನ ತಮಿಳುನಾಡಿನ ಕನ್ಯಾಕುಮಾರಿ ಮೂಲದ ಮಣಿಕಂದನ್ ಶಂಕರ್ ಎಂಬಾತನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಕೇರಳ ಎಡಿಜಿಪಿ ಮನೋಜ್ ಅಬ್ರಾಹಂ ನಿರ್ದೇಶನದ ಮೇರೆಗೆ ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಬಲರಾಮ್ ಉಪಾಧ್ಯಾಯ್ ನೇತೃತ್ವದಲ್ಲಿ ನಡೆದ ತನಿಖೆಯ ವೇಳೆ ಆರೋಪಿ ಭಾಗ್ಯರಾಜ್‌ನನ್ನು ಬಂಧಿಸಲಾಗಿದೆ.
ನಟಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಎಡಿಟ್ ಮಾಡಲಾದ ಅಶ್ಲೀಲ ಚಿತ್ರಗಳನ್ನು ಆರೋಪಿಗಳು ಹರಿಬಿಡುತ್ತಿದ್ದರು. ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವಾದ ತಮ್ಮ ಅಶ್ಲೀಲ ಫೋಟೋಗಳನ್ನು ನೋಡಿ ನಟಿಗೆ ಶಾಕ್ ಆಗಿತ್ತು. ಈ ಸಂಬಂಧ ನಟಿ ಪ್ರವೀಣಾ ದೂರು ದಾಖಲಿಸಿದ್ದರು.
PublicNext
02/12/2021 03:39 pm