ಚೆನ್ನೈ: ಅಪ್ಪು ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ನಟ ವಿಜಯ್ ಸೇತುಪತಿ ಮೇಲೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಹಲ್ಲೆ ಮಾಡಿದ್ದ.ಹಲ್ಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು ನಂತರ ಹಲ್ಲೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದರು.
ನಟ ಈ ವಿಷಯವನ್ನು ಸಣ್ಣ ಜಗಳ ಎಂದು ತಳ್ಳಿಹಾಕಿದರೆ, ಹಿಂದೂ ಮಕ್ಕಳ್ ಕಚ್ಚಿ ಎಂದು ಕರೆಯಲ್ಪಡುವ ಗುಂಪೊಂದು ವಿಜಯ್ ಸೇತುಪತಿಗೆ ಒದೆಯುವವರಿಗೆ 1,001 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಹಿಂದೂ ಮಕ್ಕಳ್ ಕಚ್ಚಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ವಿಜಯ್ ಸೇತುಪತಿ ಅವರು ಸ್ವಾತಂತ್ರ್ಯ ಹೋರಾಟಗಾರ ದೈವತಿರು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅಯ್ಯ ಮತ್ತು ದೇಶವನ್ನು ಅವಮಾನಿಸಿದ್ದಾರೆ ಎಂದು ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.
“ತೇವರ್ ಅಯ್ಯ ಅವರನ್ನು ಅವಮಾನಿಸಿದ ನಟ ವಿಜಯ್ ಸೇತುಪತಿಗೆ ಒದೆಯುವವರಿಗೆ ಅರ್ಜುನ್ ಸಂಪತ್ ಅವರು ನಗದು ಪುರಸ್ಕಾರವನ್ನು ಘೋಷಿಸಿದ್ದಾರೆ. 1 ಕಿಕ್ ಗೆ 1001 ರೂ. ಎಂದು ಟ್ವೀಟ್ ಮಾಡಲಾಗಿದೆ.
PublicNext
08/11/2021 05:56 pm