ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮರೆಯಾದ ರಾಜರತ್ನನ ನೆನಪಲ್ಲಿ ನೇಣಿಗೆ ಶರಣಾದ ಯುವಕ

ದಾವಣಗೆರೆ: ಅಪ್ಪು ಅಗಲಿಕೆಯ ನೋವಿನಿಂದ ಲಕ್ಷಾಂತರ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಅವರ ಸಾವಿನ ಶೋಕ ಕಾಡುತ್ತಲೇ ಇದೆ. ಪುನೀತ್ ಅಗಲಿಕೆಯಿಂದ ನೊಂದ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ದಾವಣಗೆರೆಯ ವಿಜಯನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಸಿ. ಕುಮಾರ್ (25) ಎಂಬಾತ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಯುವಕ. ದಾವಣೆಗೆರೆಯ ವಿಜಯನಗರ ಬಡಾವಣೆ ಸಾಯಿ ಮಂದಿರ ಸಮೀಪದ ನಿವಾಸಿಯಾಗಿದ್ದ ಸಿ. ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಪುನೀತ್‌ನ ಒಂದೂ ಸಿನಿಮಾ ಬಿಡದೇ ನೋಡಿದ್ದ ಕುಮಾರ್, ಪುನೀತ್ ರಾಜಕುಮಾರ್ ನಿಧನದ ದಿನದಿಂದ ಖಿನ್ನತೆಗೆ ಒಳಗಾಗಿದ್ದ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನೇಣಿಗೆ ಶರಣಾಗಿದ್ದಾನೆ. ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

03/11/2021 09:10 am

Cinque Terre

51.69 K

Cinque Terre

10

ಸಂಬಂಧಿತ ಸುದ್ದಿ