ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಪ್ಪು-ಪಪ್ಪು' ಪುಂಡಾಟಿಕೆ: ನಿರ್ಮಾಪಕ ಸೌಂದರ್ಯ ಜಗದೀಶ್ ಪಬ್ ಮೇಲೆ ಪೊಲೀಸ್ ದಾಳಿ

ಬೆಂಗಳೂರು : ಅಪ್ಪು-ಪಪ್ಪು ಚಿತ್ರದಲ್ಲಿ ಬಾಲನಟನಾಗಿದ್ದ ಸ್ನೇಹಿತೇಶ್ ತಂದೆ ಹಾಗೂ ನಿರ್ಮಾಪಕ ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಗೆ ಸೇರಿದ ಜೆಟ್ ಲ್ಯಾಗ್ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಿನ್ನೆಯಷ್ಟೇ ತಮ್ಮ ಮನೆಯ ಎದುರಿನ ಮನೆ ಕೆಲಸದ ಮಹಿಳೆ ಮೇಲೆ ಸ್ನೇಹಿತೇಶ್ ತನ್ನ ಗುಂಪಿನ ಜೊತೆ ಬಂದು ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ.

ನಗರದ ಓರಿಯನ್ ಮಾಲ್ ಮುಂಭಾಗದಲ್ಲಿರುವ ಜೆಟ್ ಲ್ಯಾಗ್ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬೆಂಗಳೂರಿನ ಹಲವು ಜಾಗಗಳಲ್ಲಿ ಆರೋಪಿಗಳಿಗಾಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ , ಡಿಸಿಪಿ ವಿನಾಯಕ್ ಪಾಟೀಲ್ ಆರೋಪಿಗಳನ್ನು ಬಂಧಿಸುವಂತೆ ಖಡಕ್ ಸೂಚನೆ ನೀಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

25/10/2021 10:58 pm

Cinque Terre

49.32 K

Cinque Terre

2

ಸಂಬಂಧಿತ ಸುದ್ದಿ