ಕಲಾಸಾಮ್ರಾಟ್ ಎಸ್.ನಾರಾಯಣ್ ಹೆಸರಿನಲ್ಲಿ ಸೈಬರ್ ವಂಚನೆ ನಡೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿರ್ದೇಶಕರ ಹೆಸರಲ್ಲಿ ಕಿಡಿಗೇಡಿಗಳು ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ದುಡ್ಡು ಪೀಕಿದ್ದಾರೆ.
ಜತೆಗೆ ಎಸ್.ನಾರಾಯಣ್ ನಿರ್ದೇಶನದ 5-ಡಿ ಟ್ರೈಲರ್ ರಿಲೀಸ್ ಆಗಿತ್ತು.ಇದನ್ನೇ ಬಂಡವಾಳವಾಗಿರಿಕೊಂಡು ದುಡ್ಡಿನ ಬೇಡಿಕೆಯನ್ನು ಹ್ಯಾಕರ್ಸ್ ಮಾಡುತ್ತಿದ್ದಾರೆ ಎಂದು ನಾರಾಯಣ್ ದೂರಿದ್ದಾರೆ.
ನನ್ನ ಹೆಸರಿನಲ್ಲಿ ದುಡ್ಡು ಕೇಳಿದರೆ ಕೊಡಬೇಡಿ.ಯಾರಾದ್ರೂ ದುಡ್ಡು ಕೊಟ್ಟು ಮೋಸ ಹೋದರೆ ನಾನು ಜವಾಬ್ದಾರನಲ್ಲ.ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ.
ನಾನು ಪೊಲೀಸ್ ಗೆ ದೂರು ಕೊಟ್ಟಿದ್ದೇನೆ ಎಂದು ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
PublicNext
09/10/2021 12:36 pm