ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್​ ಕೇಸ್: ನಟ ಅರ್ಜುನ್ ರಾಂಪಾಲ್ ಗೆಳತಿಯ ಸಹೋದರ ಗೋವಾದಲ್ಲಿ ಅರೆಸ್ಟ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ, ನಟಿ ಗ್ಯಾಬ್ರಿಯೆಲಾ ಡೆಮೆಟ್ರಿಯೇಡ್ಸ್ ಸಹೋದರ ಅಗಿಸಿಲಾವೋ ಡೆಮೆಟ್ರಿಯೇಡ್ಸ್‌ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಬಂಧಿಸಿದೆ.

ತನ್ನ ಮನೆಯಲ್ಲಿ ಸಣ್ಣ ಪ್ರಮಾಣದ ಗಾಂಜಾ ಹೊಂದಿದ್ದ ಆರೋಪದಲ್ಲಿ ಅಗಿಸಿಲಾವೋನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಗಿಸಿಲಾವೋ ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದಾನೆ.

ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ನೇತೃತ್ವದಲ್ಲಿ ಡ್ರಗ್ಸ್ ಪೆಡ್ಲರ್‌ಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಜೊತೆಗೆ ಡ್ರಗ್ಸ್ ಖರೀದಿಸುವ ಮತ್ತು ಸೇವಿಸುವವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದರು. ಅಗಿಸಿಲವೋ ವಿರುದ್ಧ ದಾಖಲಾದ ಮೂರನೇ ಪ್ರಕರಣ ಎಂದು ಎನ್‍ಸಿಬಿ ಮೂಲಗಳ ಖಚಿತಪಡಿಸಿವೆ. ಈ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಅಗಿಸಿಲಾವೊವನ ಬಂಧನವಾಗಿತ್ತು.

Edited By : Vijay Kumar
PublicNext

PublicNext

26/09/2021 08:27 am

Cinque Terre

99.57 K

Cinque Terre

0