ಹೈದರಾಬಾದ್: ಅಜಾಗರೂಕತೆ ಹಾಗೂ ರ‍್ಯಾಶ್ ಡ್ರೈವಿಂಗ್ ಆರೋಪದ ಸಂಬಂಧ ಟಾಲಿವುಡ್ ನಟ ಸಾಯಿ ಧರಂ ತೇಜ್ ವಿರುದ್ಧ ರಾಯ್‌ದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಅಪಘಾತವಾಗಿದೆ. ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯಗಳು ದಾಖಲಾಗಿವೆ ಎಂದು ಮಾಹಿತಿ ನೀಡಿರುವ ಪೊಲೀಸರು, ಸಾಯಿ ಅವರ ಸ್ಪೋರ್ಟ್ಸ್ ಬೈಕ್ ಅನ್ನು ಸೀಜ್ ಮಾಡಿ ರಾಯ್‌ದುರ್ಗಂ ಪೊಲೀಸ್ ಠಾಣೆಗೆ ತಂದಿದ್ದಾರೆ.
ಐಪಿಸಿಸಿ ಸೆಕ್ಷನ್ 336, 184 ಎಂಪಿ ಕಾಯ್ದೆಯಡಿ ನಟ ಸಾಯಿ ಧರಂ ತೇಜ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ದುರ್ಗಂ ಚೇರವು ಕೇಬಲ್ ಬ್ರಿಡ್ಜ್ ಮೇಲೆ ನಿನ್ನೆ ರಾತ್ರಿ 8.05ರ ಸುಮಾರಿಗೆ ಸಾಯಿ ಧರಂ ತೇಜ್ ಅವರ ಸ್ಪೋರ್ಟ್ಸ್ ಬೈಕ್ ಅಪಘಾತವಾಗಿತ್ತು. ದುರಂತದಲ್ಲಿ ತೇಜ್ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಕೂಡಲೇ ಅವರನ್ನು ಮೆಡಿಕವರ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು.
PublicNext
11/09/2021 05:32 pm