ತಿರುವನಂತಪುರಂ: ಮಲಯಾಳಂನ ಜನಪ್ರಿಯ ಕಿರುತೆರೆ ನಟ ರಮೇಶ್ ವಾಲಿಯಸಾಲ (54) ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ತಮ್ಮ ನಿವಾಸದ ಸಮೀಪವೇ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ವಲಿಯಶಾಳ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ರಮೇಶ್ ಎರಡು ದಿನಗಳ ಹಿಂದೆ ತಮ್ಮ ಹೊಸ ಪ್ರಾಜೆಕ್ಟ್ಗಾಗಿ ಶೂಟಿಂಗ್ ಸ್ಥಳದಿಂದ ಹಿಂದಿರುಗಿದ್ದರು. ಈಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಕೇರಳ ರಾಜ್ಯದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿ ನಟರಲ್ಲಿ ಒಬ್ಬರಾಗಿದ್ದ ರಮೇಶ್, ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 22 ವರ್ಷಗಳಿಂದ ನಾಟಕ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ರಮೇಶ್ ತೊಡಗಿಸಿಕೊಂಡಿದ್ದರು.
'ಜೀವನದಲ್ಲಿ ಬಹಳಷ್ಟು ಸಮಸ್ಯೆಗಳಿರುತ್ತವೆ. ಆದರೆ ಅದರಿಂದ ತಪ್ಪಿಸಿಕೊಂಡು ಓಡಿಹೋಗುವುದರಲ್ಲಿ ಅರ್ಥವಿಲ್ಲ. ನನ್ನ ಆತ್ಮೀಯ ಗೆಳೆಯ ರಮೇಶನಿಗೆ ಶ್ರದ್ಧಾಂಜಲಿಗಳು' ಎಂದು ನಿರ್ಮಾಪಕ ಎನ್.ಎಂ.ಬಾದುಷಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
11/09/2021 03:32 pm