ಡ್ರಗ್ಸ್ ಪ್ರಕರಣದಲ್ಲಿ ಆ್ಯಂಕರ್ ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಮಂಗಳೂರು ಡ್ರಗ್ಸ್ ಕೇಸ್ ನ ಎ2 ಆರೋಪಿ ಕಿಶೋರ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾನೆ ಎಂದು ಹೇಳಲಾಗಿತ್ತು.
ಇದೀಗ ಮುಂಬೈನಿಂದ ಬೆಂಗಳೂರಿಗೆ ಬಂದ ನಟಿ, ಆ್ಯಂಕರ್ ಅನುಶ್ರೀ ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭಯಪಟ್ಟಿಕೊಂಡು ಮುಂಬೈಗೆ ಹೋಗಿಲ್ಲ, ನಾನು ಕೆಲಸದ ನಿಮಿತ್ತ ಬಾಂಬೆಗೆ ಹೋಗಿದ್ದೇನೆ, ನಾನು ಭಯ ಪಟ್ಟು ಮುಂಬೈಗೆ ಹಾರಿ ಹೋಗಿಲ್ಲ, ನೀವು ಆರೋಪ ಮಾಡುವದಕ್ಕಿಂತ ಮುಂಚೆ ಮುಂಬೈಗೆ ಹೋಗಿದ್ದೇನೆ ಎಂದಿದ್ದಾರೆ.
ಅನುಶ್ರೀ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್ ಸಂಬರಗಿ ಅವರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಎಲ್ಲ ವಿಚಾರಗಳಿಗೆ ಆಗಲೂ ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಡುತ್ತಿದ್ದೇನೆ’ ಎಂದು ಅನುಶ್ರೀ ಹೇಳಿದ್ದಾರೆ.
‘ನನ್ನ ಬಗ್ಗೆ ಮಾತಾಡುವ ನೂರಾರು ಜನಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳು ಸುಳ್ಳು. ಕಿಶೋರ್ ಶೆಟ್ಟಿಯನ್ನು 12 ವರ್ಷದ ಹಿಂದೆ ನೋಡಿದ್ದೆ. 13 ವರ್ಷ ಹಿಂದೆ ಅವರು ಕೊರಿಯೋಗ್ರಾಫರ್ ಆಗಿದ್ರು. ಆ ರಿಯಾಲಿಟಿ ಶೋನಲ್ಲಿ ನಾನು ವಿನ್ನರ್ ಆಗಿದ್ದೆ. ಆಗ ಪ್ರಾಕ್ಟೀಸ್ ಮಾಡಲು ಎಲ್ಲರೂ ಒಂದೇ ಕಡೆ ಇದ್ದೆವು’ ಎಂದು ಹೇಳಿದ್ದಾರೆ.
PublicNext
09/09/2021 09:16 pm