ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನ ವ್ಯವಸ್ಥೆ ಹದಗೆಟ್ಟ ಬಗ್ಗೆ ತಿಂಗಳ ಹಿಂದೆಯೇ ಎಚ್ಚರಿಸಿದ್ದೆ: ಇಂದ್ರಜಿತ್ ಲಂಕೇಶ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆ ಪ್ರಕರಣಗಳ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರಿನಲ್ಲಾದ ಅತ್ಯಾಚಾರ ಪ್ರಕರಣಕ್ಕೆ ಹೊಸ ನಾಮಕರಣ ಮಾಡಿದ್ದಾರೆ. ನಿರ್ಭಯಾ ನಂತರದ ಮೈಸೂರಿನ ಈ ಪ್ರಕರಣಕ್ಕೆ 'ಮಾನಿನಿ' ಎಂದು ಹೆಸರಿಟ್ಟಿದ್ದಾರೆ.

"ಮೈಸೂರು ನೆಚ್ಚಿನ ತಾಣವಾಗಿತ್ತು. ನನ್ನ ಕೊನೆಯ ಹುಟ್ಟುಹಬ್ಬ ಸಹ ಇಲ್ಲೇ ಆಚರಣೆ ಆಗಿದ್ದು. ಇಂತಹ ಸ್ಥಳ ಹೀಗಾಯ್ತಲ್ಲ ಅಂತ ಬೇಜಾರಾಗುತ್ತಿದೆ. ಘಟನೆ ಬಗ್ಗೆ ಸಂಪೂರ್ಣ ಪೊಲೀಸರನ್ನು ದೂರಲು ಆಗುವುದಿಲ್ಲ. ನಾನು ಒಂದು ತಿಂಗಳ ಹಿಂದೆಯೇ ಆಡಳಿತದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದೆ. ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದ್ದೆ" ಎಂದರು.

ಇಲ್ಲಿನ ಉಸ್ತುವಾರಿ ಮಂತ್ರಿ ಯಾರು? ವಿಪಕ್ಷ ಯಾವುದು? ಆಡಳಿತ ಪಕ್ಷ ಯಾವುದು? ಅಂತಾನೇ ಗೊತ್ತಾಗ್ತಿಲ್ಲ. ಉಸ್ತುವಾರಿ ಸಚಿವರು ಏನು ಮಾಡ್ತಿದಾರೆ? ಅಧಿಕಾರಿಗಳು ಸಚಿವರ ಮಾತು ಕೇಳುತ್ತಿದ್ದರಾ ಎಂಬ ಪ್ರಶ್ನೆ ಎದ್ದಿದೆ. ಇಲ್ಲಿನ ಉಸ್ತುವಾರಿ ಮಂತ್ರಿಗಳು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ. ಹೇಗೆ ನಡೆದುಕೊಳ್ಳುತ್ತಿದ್ದಾರೆ..? ಎಂಬುದು ಸಹ ಗೊತ್ತಿದೆ ಎಂದು ಕಿಡಿಕಾರಿದರು.

Edited By : Vijay Kumar
PublicNext

PublicNext

27/08/2021 01:02 pm

Cinque Terre

58.87 K

Cinque Terre

6

ಸಂಬಂಧಿತ ಸುದ್ದಿ