ಬೆಂಗಳೂರು: 'ಮಾದಕ' ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಡ್ರಗ್ಸ್ ಸೇವಿಸಿದ್ದು ನಿಜ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ಮೂಲಕ ಸಾಬೀತಾಗಿದೆ. ವರದಿ ಬಂದ ಬೆನ್ನಲೇ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರ ನಿರ್ಮಾಪಕ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಣ್ಣ ಸಣ್ಣ ಮೀನುಗಳನ್ನು ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ದೊಡ್ಡ ದೊಡ್ಡ ತಿಮಿಂಗಲಗಳಿವೆ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆಯಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಪ್ರಕರಣವನ್ನು ತನಿಖೆ ಮಾಡಿದ ಸಿಸಿಬಿ ತಂಡದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಜೊತೆಗೆ ಕೋಟ್ಯಾಂತರ ರೂಪಾಯಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ತಂಡದ ತನಿಖೆಗೆ ಬೆನ್ನು ತಟ್ಟಲೇ ಬೇಕು ಎಂದಿದ್ದಾರೆ. ನನಗೆ ಸಿಕ್ಕಿರುವ ಮಾಹಿತಿಯನ್ನು ನಾನು ಹಂಚಿಕೊಂಡಿದ್ದೇನೆ. ಆ ಆಧಾರವಾಗಿ ತನಿಖೆ ಮಾಡಿ ಕೋರ್ಟ್‍ಗೆ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಈ ಪ್ರಕರಣ ಸಾಬೀತಾಗಿರುವುದು ಇದೀಗ ತಿಳಿದುಕೊಂಡೆ ಸಮಾಧಾನ ಆಗಿದ್ದರು. ಈ ಪ್ರಕರಣದಲ್ಲಿ ನನ್ನ ತೇಜೋವಧೆಯನ್ನು ಮಾಡಲು ಹಲವರು ಪ್ರಯತ್ನಿಸಿದರು. ಪವಿತ್ರವಾದ ಸ್ಥಳ ಗಲೀಜು ಆದ್ರೆ ಸ್ವಚ್ಛ ಮಾಡಬೇಕು. ಆ ಕೆಲಸವಾಗಿದೆ ಎಂದಿದ್ದಾರೆ.
PublicNext
24/08/2021 01:12 pm