ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ ಆದಾಗಿನಿಂದ ಅವರ ಕುಟುಂಬದಲ್ಲಿ ಕಲಹಗಳು ಎದ್ದಿವೆ. ಅದು ಈಗ ಜಗಜ್ಜಾಹೀರಾಗಿದೆ. ಇದಕ್ಕಾಗಿ ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ಅಸಲಿಯಾಗಿ ಕಣ್ಣೀರು ಹಾಕಿದ್ದೂ ಆಗಿದೆ.
ಇದೇ ವಿಚಾರವಾಗಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಅವರ ಕುಟುಂಬಸ್ಥರು ಕಾನೂನು ಹೋರಾಟ ಮಾಡ್ತಿದ್ದಾರೆ. ಕಾರಣ, ರಾಜ್ ಕುಂದ್ರಾ ನಡೆಸುತ್ತಿದ್ದರೆನ್ನಲಾದ ಬ್ಲ್ಯೂ ಫಿಲಂ ದಂಧೆಯಲ್ಲಿ ಶಮಿತಾ ಅವರ ಹೆಸರೂ ಕೇಳಿ ಬಂದಿತ್ತು.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಶಮಿತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಕಪ್ಪು ಬಣ್ಣದ ಟಾಪ್ ಧರಿಸಿದ ಸೆಲ್ಫಿ ಫೋಟೋ ಹಾಕಿದ ಶಮಿತಾ ಹತಾಶೆಯಾದಂತೆ ಬರೆದಿದ್ದಾರೆ. "ಕೆಲವೊಮ್ಮೆ ನಿಮ್ಮೊಳಗಿನ ಶಕ್ತಿಯು ಎಲ್ಲರಿಗೂ ಕಾಣುವ ಉರಿಯುತ್ತಿರುವ ದೊಡ್ಡ ಜ್ವಾಲೆಯಾಗಿರುವುದಿಲ್ಲ. ನೀವು ಮುಂದುವರೆಯುತ್ತೀರಿ. ನಿಮ್ಮ ಶಕ್ತಿಯನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ನೀವು ಹೇಳುವ ಅಥವಾ ಮಾಡುವ ಯಾವುದಾದರೂ ಆ ಕ್ಷಣದಲ್ಲಿ ವೈಯಕ್ತಿಕ ವಿಚಾರಗಳೊಂದಿಗೆ ಲೆನ್ಸ್ ಮೂಲಕ ಫಿಲ್ಟರ್ ಆಗುತ್ತದೆ. ಇದು ನಿಮ್ಮ ಬಗ್ಗೆ ಅಲ್ಲ. ಏನೇ ಆಗಲಿ ನಿಮ್ಮ ಕೆಲಸವನ್ನು ಸಾಧ್ಯವಾದಷ್ಟು ಸಮಗ್ರತೆ ಸಮಗ್ರತೆ ಮತ್ತು ಪ್ರೀತಿಯಿಂದ ಮಾಡುತ್ತಲೇ ಇರಿ" ಎಂದು ಶಮಿತಾ ಬರೆದುಕೊಂಡಿದ್ದಾರೆ.
ಶಮಿತಾ ಹಾಕಿದ ಮೋಟಿವೇಶನಲ್ ಪೋಸ್ಟ್ ಹಲವು ಕುತೂಹಲಗಳಿಗೆ ಕಾರಣವಾಗಿದೆ.
PublicNext
30/07/2021 04:59 pm