ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ನಟಿ ಸನ್ನಿ ಮೇಲೆ ಮೋಸದ ಆರೋಪ!

ಕೇರಳದ ವ್ಯಕ್ತಿಯೊಬ್ಬರಿಂದ ಸನ್ನಿ ಲಕ್ಷಾಂತರ ರೂಪಾಯಿ ಹಣ ಪಡೆದು, ನಂತರ ಮೋಸ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಸಂಬಂಧ ಸನ್ನಿ ಲಿಯೋನ್ ಅವರನ್ನು ಕೊಚ್ಚಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಕೇರಳದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಈ ಹಿಂದೆ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಜನಸಾಗರವೇ ಸೇರಿತ್ತು. ಆ ಕಾರಣಕ್ಕಾಗಿ ಅಲ್ಲಿನ ಕೆಲವು ಕಾರ್ಯಕ್ರಮ ಆಯೋಜಕರಿಗೆ ಸನ್ನಿ ಲಿಯೋನ್ ಎಂದರೆ ಅಚ್ಚುಮೆಚ್ಚು. ತಾವು ಆಯೋಜನೆ ಮಾಡುವ ಕಾರ್ಯಕ್ರಮಗಳಿಗೆ ಸನ್ನಿ ಲಿಯೋನ್ ರನ್ನು ಅತಿಥಿಯಾಗಿ ಆಹ್ವಾನಿಸಬೇಕು ಎಂಬುದು ಬಹುತೇಕರ ಆಸೆ. ಆದರೆ ಅದೇ ಈಗ ಸಮಸ್ಯೆಗೆ ಕಾರಣ ಆಗಿದೆ.

ಕೇರಳದಲ್ಲಿ ನಡೆಯಬೇಕಿದ್ದ ಎರಡು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತೇನೆ ಎಂದು ಒಪ್ಪಿಕೊಂಡು ಸನ್ನಿ ಲಿಯೋನ್ 29 ಲಕ್ಷ ರೂ. ಪಡೆದುಕೊಂಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರು ಆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ತಮಗೆ ಭಾರಿ ನಷ್ಟ ಆಗಿದೆ ಎಂದು ಶಿಯಾಸ್ ಎಂಬ ವ್ಯಕ್ತಿ ದೂರು ನೀಡಿದ್ದರು. ಅದನ್ನು ಆಧರಿಸಿ ಸನ್ನಿಯನ್ನು ಅಧಿಕಾರಿಗಳು ಈಗ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಸನ್ನಿ ರಜೆಯ ಮಜಾ ಸವಿಯುತ್ತಿದ್ದಾರೆ. 'ನಾನು ಯಾರಿಗೂ ಮೋಸ ಮಾಡಿಲ್ಲ. ಅವರು ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ. ಐದಕ್ಕಿಂತ ಹೆಚ್ಚು ಬಾರಿ ಅವರು ಕಾರ್ಯಕ್ರಮವನ್ನು ಮುಂದೂಡಿದ್ದರು. ಸರಿಯಾದ ದಿನಾಂಕದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ನಾನು ಖಂಡಿತಾ ಬರುತ್ತೇನೆ' ಎಂದು ಸನ್ನಿ ಉತ್ತರಿಸಿದ್ದಾರೆ ಎಂದು ವರದಿ ಆಗಿದೆ.

Edited By : Nirmala Aralikatti
PublicNext

PublicNext

06/02/2021 04:14 pm

Cinque Terre

74.64 K

Cinque Terre

2

ಸಂಬಂಧಿತ ಸುದ್ದಿ