ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವರಾಜ್ 17 ವರ್ಷಗಳಿಂದ ಪರಿಚಯ- ನಮ್ಮ ತಂದೆ ಕಾಲದಿಂದಲೂ ಒಡನಾಟವಿತ್ತು- ಮಕ್ಮಲ್ ಟೋಪಿ ಸ್ವಾಮಿ ಬಗ್ಗೆ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಆರ್‌ಎಸ್‌ಎಸ್ ಮುಖಂಡನೆಂದು ಹೇಳಿ ಅನೇಕರಿಗೆ ವಂಚನೆ ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸ್ವಾಮಿ ಅಲಿಯಾಸ್ ಯುವರಾಜ್ ಕೇಸ್‌ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿ ಬಂದಿದೆ. ಇದಕ್ಕೆ ನಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಧಿಕಾ ಅವರು, ‘ಯುವರಾಜ್ ಅವರು ನನ್ನ ತಂದೆಯ ಸ್ನೇಹಿತರು. 17 ವರ್ಷಗಳಿಂದ ಅವರ ಪರಿಚಯವಿದೆ. ಯುವರಾಜ್ ಅವರು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆ ಹೊಂದಿದ್ದಾರೆ. ಐತಿಹಾಸಿಕ ಸಿನಿಮಾ ಮಾಡುವ ಸಂಬಂಧ ನನ್ನೊಂದಿಗೆ ಚರ್ಚಿಸಿದ್ದರು. ಸಿನಿಮಾ ಮಾಡಲು ನಾನೂ ಒಪ್ಪಿದ್ದೆ. ಮುಂಗಡವಾಗಿ 15 ಲಕ್ಷ ರೂ. ನೀಡಿದ್ದರು. ಬೇರೆ ನಿರ್ಮಾಪಕರಿಂದ 60 ಲಕ್ಷ ರೂ. ಹಾಕಿಸಿದ್ದರು. ಆದರೆ ಸಿನಿಮಾ ಅಗ್ರಿಮೆಂಟ್ ಆಗಲಿಲ್ಲ. ಇದಕ್ಕೂ ನನ್ನ ಸಹೋದರ ರವಿರಾಜ್‌ಗೂ ಸಂಬಂಧವಿಲ್ಲ’ ಎಂದು ತಿಳಿಸಿದ್ದಾರೆ.

‘ಯುವರಾಜ್ ಅವರು ಜ್ಯೋತಿಷಿ. ಎಷ್ಟೋ ಬಾರಿ ಅವರು ಹೇಳಿದಂತೆ ನಮ್ಮ ಜೀವನದಲ್ಲಿ ಘಟನೆಗಳು ನಡೆದಿವೆ. ನಮ್ಮ ತಂದೆ ಸಾವಿನ ಸೂಚನೆಯೂ ನೀಡಿದ್ದರು. ಡಿಸೆಂಬರ್‌ನಲ್ಲಿ ನನಗೆ ಸಮಯ ಸರಿ ಇರುವುದಿಲ್ಲ ಎಂದಿದ್ದರು. ಆದರೆ ಅವರಿಂದಲೇ ಈ ರೀತಿ ಸಮಸ್ಯೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪೊಲೀಸರು ಅವರನ್ನು ಬಂಧಿಸಿದಾಗ ಆಶ್ಚರ್ಯಗೊಂಡಿದ್ದೆ. ಬಂಧನಕ್ಕೂ ಒಂದು ವಾರದ ಹಿಂದೆ ಅವರೊಂದಿಗೆ ಮಾತನಾಡಿದ್ದೆ. ಸಹೋದರ ರವಿರಾಜ್ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. ವಿಚಾರಣೆಗೆ ಕರೆದರೆ ನಾನೂ ಹಾಜರಾಗುತ್ತೇನೆ ಎಂದು ಹೇಳಿದರು.

Edited By : Vijay Kumar
PublicNext

PublicNext

06/01/2021 03:35 pm

Cinque Terre

95.35 K

Cinque Terre

1