ಬೆಂಗಳೂರು : ಸ್ಯಾಂಡಲವುಡ್ ದಂಗು ಬಡಸಿರುವ ಡ್ರಗ್ಸ್ ಜಾಲದ ಕುರಿತು ಬಿಸಿ ಬಿಸಿ ಚರ್ಚೆ ಆರಂಭವಾಗಿದೆ ಇದರಲ್ಲಿ ಈಗ ನಟ ಭುವನ್ ಪೊನ್ನಣ್ಣ ನಾನು ಟುಮಾರೋಲ್ಯಾಂಡ್ ಪಾರ್ಟಿಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ.
ಡ್ರಗ್ಸ್ ವಿಚಾರವಾಗಿ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಭುವನ್, ಎಲ್ಲಾ ಪಾರ್ಟಿಗಳೂ ಒಂದೇ ರೀತಿ ಇರೋದಿಲ್ಲ. ಮೊದಲು ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ವಿಷಯ ಕೇಳಿ ತುಂಬಾನೆ ಶಾಕ್ ಆಯ್ತು. ಕೆಲವೆಡೆ ಡ್ರಗ್ಸ್ ಇರಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾರ್ಟಿ ಅಂದರೆ ಬರ್ತ್ ಡೇ ಸೇರಿ ಬೇರೆ ಬೇರೆ ರೀತಿ ಇರುವುದು ನಾನು ಟುಮಾರೋಲ್ಯಾಂಡ್ ಪಾರ್ಟಿ ಅಟೆಂಡ್ ಮಾಡಿದ್ದೇನೆ. ಆ ಪಾರ್ಟಿ ಬಗ್ಗೆ ಜನರಿಗೆ ತಪ್ಪು ತಿಳುವಳಿಕೆ ಇದೆ. ಅದೊಂದು ಮ್ಯೂಸಿಕ್ ಪಾರ್ಟಿ. ಏಳು ಬೇರೆ, ಬೇರೆ ಸ್ಟೇಜ್ ಇರುತ್ತೆ. ನಾವು ನಮ್ಮ ದೇಶವನ್ನು ಪ್ರತಿನಿಧಿಸಿದ್ದೆ, ಫ್ಲ್ಯಾಗ್ ಹಿಡಿದು ಮ್ಯೂಸಿಕ್ ಡ್ಯಾನ್ಸ್ ಮಾಡಿದ್ದು ಅಷ್ಟೇ. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಬೇಸರವಾಗಿದೆ ಎಂದಿದ್ದಾರೆ ಭುವನ್.
PublicNext
19/09/2020 09:21 am