ಪಣಜಿ: ಬಾಲಿವುಡ್ ನಟಿ ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಮಂಗಳವಾರ ಗೋವಾದಲ್ಲಿ ಬಂಧಿಸಿದ್ದಾರೆ.
ದಕ್ಷಿಣ ಗೋವಾದ ಕೆನಕೋನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪಾಂಡೆ ಸದ್ಯ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಪೂನಂ ಪಾಂಡೆ ಸೋಮವಾರ ತಡರಾತ್ರಿ ದೂರು ನೀಡಿದ್ದರು.
ಪೂನಂ ಪಾಂಡೆ ಸೆಪ್ಟೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, 'ನಿಮ್ಮೊಂದಿಗೆ ಏಳು ಜನ್ಮ ಎದುರು ನೋಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದರು. 46 ವರ್ಷದ ಸ್ಯಾಮ್ ಬೊಂಬೆ ಮೂಲತಃ ನಿರ್ದೇಶಕರು.
PublicNext
22/09/2020 08:19 pm