ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಆ್ಯಂಕರ್ ಅನುಶ್ರೀಗೆ ನೋಟಿಸ್ ಜಾರಿ ಮಾಡಿದ ಹಿನ್ನಲೆಯಲ್ಲಿ ಇಂದು ಅನುಶ್ರೀ ವಿಚಾರಣೆಗಾಗಿ ಮಂಗಳೂರಿಗೆ ಹೊರಟ್ಟಿದ್ದಾರೆ.
ಡ್ಯಾನ್ಸರ್ ಕಿಶೋರ್ ಶೆಟ್ಟಿಯಿಂದ ಡ್ರಗ್ಸ್ ಸಾಗಟ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರಿಂದ ಅನುಶ್ರೀಗೆ ನೋಟಿಸ್ ಜಾರಿಯಾಗಿತ್ತು.
ಈ ವೇಳೆ ಪೊಲೀಸರು, ಕಿಶೋರ್ ಶೆಟ್ಟಿ ಹಾಗು ತರುಣ್ ಜೊತೆಗಿನ ನಂಟಿನ ಬಗ್ಗೆ ಅನುಶ್ರೀ ಅವರನ್ನ ಪ್ರಶ್ನೆ ಮಾಡುವ ಸಾಧ್ಯತೆ ಇದೆ.
ಕಿಶೋರ್ ಶೆಟ್ಟಿ ಆಪ್ತ ತರುಣ್ ತಾನು ಅನುಶ್ರೀ ಜೊತೆಗೆ ಪಾರ್ಟಿ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆ ಇಂದು ಸಿಸಿಬಿ ಅಥವಾ ನರ್ಕೋಟಿಕ್ಸ್ ಕಚೇರಿಗೆ ಬಂದು ಅನುಶ್ರೀ ವಿಚಾರಣೆ ಎದುರಿಸಲಿದ್ದಾರೆ.
PublicNext
25/09/2020 09:43 am