ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ವಿಚಾರದಲ್ಲಿ NCB ಕಂಗನಾಳನ್ನು ವಿಚಾರಿಸಲು ಬೆದರುತ್ತಿದೆ : ನಟಿ ನಗ್ಮ

ಡ್ರಗ್ಸ್ ಜಾಡು ಬೆನ್ನತ್ತಿದ್ದ ಎನ್ ಸಿಬಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ನನ್ನು ವಿಚಾರಣೆ ನಡೆಸಲಿದೆ ಎಂಬ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ನಟಿ ಕಾಂಗ್ರೆಸ್ ನಾಯಕಿ ನಗ್ಮ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಡ್ರಗ್ಸ್ ತೆಗೆದುಕೊಂಡಿದ್ದೇನೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಒಪ್ಪಿಕೊಂಡಿದ್ರೂ ಎನ್ ಸಿಬಿ ಅವರನ್ಯಾಕೆ ವಶಕ್ಕೆ ಪಡೆದಿಲ್ಲ ಎಂದು ನಟಿ ನಗ್ಮಾ ಪ್ರಶ್ನಿಸಿದ್ದಾರೆ.

ತನಿಖೆಯ ಪ್ರತಿ ವಿಚಾರವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡು ಎನ್ ಸಿಬಿ ಬಾಲಿವುಡ್ ನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಾಟ್ಸಾಪ್ ಚಾಟ್ ಆಧಾರದ ಮೇಲೆ ಉಳಿದ ಬಾಲಿವುಡ್ ನಟಿಯರನ್ನು ವಿಚಾರಣೆ ನಡೆಸಬಹುದಾದ್ರೆ ಡ್ರಗ್ಸ್ ತೆಗೆದುಕೊಂಡಿದ್ದೆ ಎಂದ ಒಪ್ಪಿಕೊಂಡ ಕಂಗನಾಳನ್ಯಾಕೆ ಎನ್ಸಿಬಿ ಅರೆಸ್ಟ್ ಮಾಡಿಲ್ಲ..?

ತನಿಖೆಯ ಮಾಹಿತಿ ಎಲ್ಲ ಮಾಧ್ಯಮಗಳಿಗೆ ಹೇಳಿ ಪ್ರಸಿದ್ಧ ತಾರೆಯರ ಹೆಸರು ಹೇಳೋ ಮೂಲಕ ಬಾಲಿವುಡ್ ಹೆಸರು ಕೆಟ್ಟದಾಗಿ ಬಿಂಬಿಸಲು ಎನ್ ಸಿಬಿ ಪ್ರಯತ್ನಿಸುತ್ತಿದೆಯಾ ಎಂದು ನಟಿ ನಗ್ಮಾ ಪ್ರಶ್ನಿಸಿದ್ದಾರೆ.

Edited By : Nirmala Aralikatti
PublicNext

PublicNext

24/09/2020 02:32 pm

Cinque Terre

154.47 K

Cinque Terre

2