ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್-ಸ್ಮಿತ್ ಬಗ್ಗೆ ಮಾಡಿದ ಹಾಸ್ಯಕ್ಕೆ ಕೆರಳಿ ವಿಲ್ ಸ್ಮಿತ್, ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ್ರು. ಈ ಪ್ರಸಂಗದ ಬೆನ್ನಲ್ಲೇ ವಿಲ್ ಸ್ಮಿತ್ ಮನೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿಲ್ ಸ್ಮಿತ್ ಅವರ ಮನೆ ಮೇಲೆ ಡ್ರೋಣ್ ಹಾರಾಟದ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಅಲ್ಲಿ ಹಾರಾಡಿದ ಡ್ರೋಣ್ ಪತ್ತೆ ಮಾಡಲು ನಮ್ಮ ಪೊಲೀಸರನ್ನು ಕಳಿಸಿದ್ದೇವೆ. ಆದ್ರೆ ಅಲ್ಲಿ ಡ್ರೋಣ್ ಪತ್ತೆ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಡ್ರೋಣ್ ಹಾರಾಟದ ಬಗ್ಗೆ ಕರೆ ಸ್ವೀಕರಿಸಿದ ನಂತರ ಸ್ಮಿತ್ ಅವರ ಕ್ಯಾಲಬಾಸಾಸ್ ಭವನಕ್ಕೆ ಪೊಲೀಸ್ ತಂಡ ಭೇಟಿ ನೀಡಿತು ಎಂದು ವಕ್ತಾರರು ಹೇಳಿದ್ದಾರೆ.
ಆದರೆ ವಿಲ್ ಸ್ಮಿತ್ ಅವರ ಮನೆ ಮೇಲೆ ಡ್ರೋಣ್ ಹಾರಾಡುತ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದು ಯಾರು ಎಂಬುದು ಸಹ ಇದುವರೆಗೂ ಪತ್ತೆಯಾಗಿಲ್ಲ.
PublicNext
30/03/2022 04:51 pm