ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಸುರಕ್ಷಿತವಲ್ಲ ಎನ್ನುವ ನಟರು ಅಪ್ಘಾನಿಸ್ತಾನಕ್ಕೆ ಹೋಗಲಿ: ಅನಂತ್ ನಾಗ್

ಭಾರತ ಸುರಕ್ಷಿತವಲ್ಲ ಎಂದು ಹೇಳಿದ್ದ ನಟರು ಅಫ್ಘಾನಿಸ್ತಾನಕ್ಕೆ ಹೋಗಲಿ, ಅಲ್ಲಿನ 'ಸ್ವರ್ಗ'ದಲ್ಲಿ ನೆಮ್ಮದಿಯಿಂದ ಬದುಕಲಿ ಎಂದಿದ್ದಾರೆ ಹಿರಿಯ ನಟ ಅನಂತ್‌ನಾಗ್.

ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಹಿರಿಯ ನಟ ಅಂತ್ ನಾಗ್ ಈ ರೀತಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಜನರ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ, ''ಆ ಉಗ್ರರಿಂದ ತಪ್ಪಿಸಿಕೊಳ್ಳಲು ಆ ಜನ ತಮ್ಮ ಕುಟುಂಬದವರನ್ನೂ ಹಿಂದೆ ಬಿಟ್ಟು ಹೇಗಾದರೂ ಇಲ್ಲಿಂದ ಪಾರಾಗಬೇಕು ಎಂಬ ಧಾವಂತದಲ್ಲಿ ವಿಮಾನಗಳ ಹಿಂದೆ ಓಡುತ್ತಿದ್ದಾರೆ. ವಿಮಾನಗಳಿಗೆ ತಮ್ಮನ್ನು ಕಟ್ಟಿಕೊಂಡು ಹಾರಲು ಯತ್ನಿಸುತ್ತಿದ್ದಾರೆ. ವಿಮಾನದಿಂದ ಕೆಳಗೆ ಬಿದ್ದು ಜನ ಸತ್ತಿದ್ದಾರೆ'' ಎಂದು ಅನಂತ್‌ನಾಗ್ ತಾವು ಮಾಧ್ಯಮಗಳಲ್ಲಿ ಕಂಡದ್ದನ್ನು ವಿವರಿಸಿದ್ದಾರೆ.

Edited By : Nagaraj Tulugeri
PublicNext

PublicNext

19/08/2021 07:55 am

Cinque Terre

120.96 K

Cinque Terre

62