ಬೆಂಗಳೂರು: ಡ್ರಗ್ಸ್ ಜಾಲದ ನಂಟು ಪ್ರಕರಣವು ಸ್ಯಾಂಡಲ್ವುಡ್ನ್ನು ತಲ್ಲಣಗೊಳಿಸಿದೆ. ಇದೀಗ ಖ್ಯಾತ ನಟ ಮತ್ತು ಕ್ರಿಕಟರ್ ಹೆಸರು ಪ್ರಕರಣದಲ್ಲಿ ಕೇಳಿ ಬರುತ್ತಿದೆ.
ಡ್ರಗ್ ಪೆಡ್ಲರ್ ಓರ್ವನ ಹೇಳಿಕೆಯ ಆಧಾರ ಮೇಲೆ ಸೋಮವಾರ ಲೂಸ್ ಮಾದ ಖ್ಯಾತಿಯ ನಟ ಯೋಗಿ ಮತ್ತು ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಅವರನ್ನು ಐಎಸ್ಡಿ ವಿಚಾರಣೆಗೆ ಒಳಪಡಿಸಿದೆ ಎನ್ನಲಾಗಿದೆ. ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಇವರಿಬ್ಬರನ್ನೂ ವಿಚಾರಣೆ ಮಾಡಿದ್ದಾಗಿ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಮಾದಕ ವಸ್ತು ಜಾಲದ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಎಸ್ಡಿಯಿಂದ ಹಲವು ಕಿರುತೆರೆ ನಟ-ನಟಿಯರನ್ನೂ ವಿಚಾರಣೆ ಮಾಡಲಾಗಿದೆ. ಈ ವೇಳೆ ವಿಚಾರಣೆ ಎದುರಿಸಿದ್ದ ನಟನೋರ್ವ ಹಲವು ಕಿರುತೆರೆ ನಟಿಯರ ಹೆಸರನ್ನೂ ಹೇಳಿದ್ದಾನೆ ಎನ್ನಲಾಗಿದೆ.
PublicNext
21/09/2020 10:47 pm