ಮುಂಬೈ : ದಿನದಿಂದ ದಿನಕ್ಕೆ ಡ್ರಗ್ಸ್ ದಂಧೆಯಲ್ಲಿ ಅಚ್ಚರಿಯ ಹೆಸರುಗಳು ತಳಕು ಹಾಕಿಕೊಳ್ಳುತ್ತಿವೆ.
ಸದ್ಯ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದ್ದಂತೆ, ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳುತ್ತಾರೆ ಎಂದು ನಟಿ ಕಂಗನಾ ರಣಾವತ್ ಕುಟುಕಿದ್ದಾರೆ.
ದೀಪಿಕಾಗೆ ಸಂಬಂಧಿಸಿದ ಖಾಸಗಿ ವಾಹಿನಿಯ ಸುದ್ದಿಗೆ ಕಂಗನಾ ರಣಾವತ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಆಶಿಕಿ ಚೆಲುವೆ, ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ನಡೆಸಿರುವ ವಾಟ್ಸಪ್ ಸಂಭಾಷಣೆ ರಿವೀಲ್ ಆಗಿದೆ.
ಹೀಗಿದೆ ಕಂಗನಾ ಟ್ವೀಟ್ : ಡ್ರಗ್ಸ್ ಸೇವನೆ ಖಿನ್ನತೆಯುನ್ನುಂಟು ಮಾಡುತ್ತೆ ಮತ್ತೊಮ್ಮೆ (ರಿಪೀಟ್ ಆಫ್ಟರ್ ಮಿ) ಹೇಳುತ್ತಿದ್ದೇನೆ. ತಮ್ಮನ್ನು ದೊಡ್ಡ ಸ್ಟಾರ್, ಹೈ ಸೊಸೈಟಿಯ ಮಕ್ಕಳು ಎಂದು ಕರೆದುಕೊಳ್ಳುವರು ಉತ್ತಮ ಲಾಲನೆ-ಪಾಲನೆಯಲ್ಲಿ ಬೆಳೆದಿರುತ್ತಾರೆ.
ಆದ್ರೂ ತಮ್ಮ ಮ್ಯಾನೇಜರ್ ಬಳಿ ಮಾಲ್ ಇದೆಯಾ ಎಂದು ಕೇಳುತ್ತಾರೆ.
ಮಗದೊಂದು ಟ್ವೀಟ್ ಮಾಡಿರುವ ಕಂಗನಾ, ನೆರೆಯ ದೇಶಗಳ ಸ್ವಾರ್ಥಿಗಳು ನಮ್ಮ ರಾಷ್ಟ್ರ ಮತ್ತು ಯುವ ಜನತೆಯ ಭವಿಷ್ಯವನ್ನ ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ.
ಯುವ ಜನತೆಗೆ ಡ್ರಗ್ಸ್ ಸೇವನೆಗೆ ಪ್ರಚೋದಿಸುತ್ತಿವೆ. ನಮ್ಮ ಮುಂದಿರುವ ದೊಡ್ಡ ಸವಾಲುಗಳಲ್ಲಿ ಇದು ಒಂದಾಗಿದೆ. ಈ ವಿಷಯದಲ್ಲಿ ಚರ್ಚಿಸಲು ಸಿದ್ಧರಿದ್ದೇವಾ ಎಂದು ಪ್ರಶ್ನೆ ಮಾಡಿದ್ದಾರೆ.
ರಿಪೀಟ್ ಆಫ್ಟರ್ ಮಿ: ಜೂನ್ ನಲ್ಲಿ ದೀಪಿಕಾ ಪಡುಕೋಣೆ ರಿಪೀಟ್ ಆಫ್ಟರ್ ಮಿ ಎಂಬ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದರು.
ಇದೀಗ ಕಂಗನಾ ಅದೇ ಪದಗಳನ್ನ ಬಳಸುವ ಮೂಲಕ ದೀಪಿಕಾರಿಗೆ ಟಾಂಗ್ ನೀಡಿದ್ದಾರೆ.
PublicNext
22/09/2020 01:26 pm