ಮುಂಬೈ: ಕಿರುತೆರೆ ನಟಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ನಿರ್ದೇಶಕ ಆಯುಷ್ ತಿವಾರಿ ವಿರುದ್ಧ ದೂರು ದಾಖಲಿಸಿದ್ದಾರೆ.
ಆಯುಷ್ ತಿವಾರಿ ಅವರು ನನಗೆ ಬಾಲಿವುಡ್ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿದ್ದರು.
ಅದೇ ಕಾರಣವನ್ನು ಇಟ್ಟುಕೊಂಡು ಎರಡು ವರ್ಷದ ಹಿಂದಿನಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ.
ನಾನು ಗರ್ಭಿಣಿ ಎಂದು ಗೊತ್ತಾದ ಬಳಿಕ ಮದುವೆ ಆಗಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ವಿಚಾರವಾಗಿ ನವೆಂಬರ್ 16ರಂದು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರನ್ನು ಹಿಂಪಡೆಯುವಂತೆ ಆಯುಷ್ ಬೆದರಿಸಿದ್ದು, ದೂರು ವಾಪಾಸು ತೆಗೆದುಕೊಳ್ಳದಿದ್ದರೆ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆಯನ್ನೂ ಕೊಟ್ಟಿರುವುದಾಗಿ ನಟಿ ದೂರಿದ್ದಾರೆ.
ಈ ನಟಿ ಕಿರುತೆರೆ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿರುವುದಾಗಿ ತಿಳಿಸಲಾಗಿದೆ.
PublicNext
01/12/2020 06:51 pm