ನವದೆಹಲಿ: ಬಾಲಿವುಡ್ ನಟ ಆಸಿಫ್ ಬಸರಾ ನೇಣಿಗೆ ಶರಣಾಗಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಾಕು ನಾಯಿ ಜತೆ ಹೊರಗೆ ಹೋಗಿದ್ದರು. ವಾಪಸ್ ಬಂದವರು ನೇಣಿಗೆ ಶರಣಾಗಿದ್ದಾರೆ.
ಇವರು ಐದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಿಮಾಚಲ ಪ್ರದೇಶದ ಮೆಕ್ಲಿಯಾಡ್ಗಂಜ್ ಎಂಬಲ್ಲಿ ಸ್ನೇಹಿತೆಯ ಜತೆಗೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದರು ಎನ್ನಲಾಗಿದೆ.
ಇವರು ನಟ ಸುಶಾಂತ್ ರಜಪೂತ್ ಜತೆ 'ಕಾಯ್ ಪೂಚ್' ಸಿನಿಮಾದಲ್ಲಿ ನಟನೆ ಮಾಡಿ ಪ್ರಸಿದ್ಧಿ ಪಡೆದಿದ್ದರು.
ಇದರ ಜತೆಗೆ ಕೆಲವು ಹಿರಿತೆರೆ, ಕಿರುತೆರೆಗಳಲ್ಲಿಯೂ ನಟಿಸಿದ್ದಾರೆ. ಮಾತ್ರವಲ್ಲದೇ ಹಾಲಿವುಡ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇವರು ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
12/11/2020 05:14 pm