ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಆದಂ ಪಾಷಾ ಅವರನ್ನ ಎನ್‍ಸಿಬಿ (ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಡ್ರಗ್ ಪೆಡ್ಲರ್ ಅನಿಕಾಳಿದಂದ ಆದಂ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆದಂ ಪಾಷಾಗೆ ಎನ್‍ಸಿಬಿ ಸಮನ್ಸ್ ನೀಡಿತ್ತು. ಆಗಸ್ಟ್ 19ರಂದು ಎನ್.ಸಿ.ಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದ ಅನಿಕಾ ಜೊತೆಗೆ ಆದಂ ಪಾಷಾಗೆ ಸಂಪರ್ಕವಿದ್ದು ಡ್ರಗ್ಸ್ ಖರೀದಿಸಿರುವ ಬಗ್ಗೆ ಪಕ್ಕಾ ಮಾಹಿತಿಗಳನ್ನ ಆಧರಿಸಿದ ಬೆಂಗಳೂರು ವಿಭಾಗದ ಎನ್‍ಸಿಬಿ ಅಧಿಕಾರಿಗಳು ಪಾಷಾರನ್ನ ವಶಕ್ಕೆ ಪಡೆದಿದೆ.
PublicNext
20/10/2020 11:27 pm