ಮುಂಬೈ: 3 ವರ್ಷ ನನ್ನ ಮೇಲೆ ಅತ್ಯಾಚಾರ ಎಸಗಿ, ಗರ್ಭಪಾತಕ್ಕೆ ಒತ್ತಡ ಹೇರಿದ್ದ ಎಂದು ನಟ ಮಿಥುನ್ ಚಕ್ರವರ್ತಿ ಅವರ ಪುತ್ರ ಮಹಾಕ್ಷಯ್ ವಿರುದ್ಧ ನಟಿಯೊಬ್ಬರು ದೂರು ನೀಡಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಮಹಾಕ್ಷಯ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನಾನು ಮಹಾಕ್ಷಯ್ ಅವರೊಂದಿಗೆ 2015ರಿಂದ ಸಂಬಂಧ ಹೊಂದಿದ್ದು, ಅವರ ತಾಯಿಯೂ ಸಹ ಇಬ್ಬರಿಗೂ ಮದುವೆ ಮಾಡಿಸುವ ಭರವಸೆ ನೀಡಿದ್ದರು. 2015ರಲ್ಲಿ ಮಹಾಕ್ಷಯ್ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ತಂಪು ಪಾನೀಯದಲ್ಲಿ ಮಾದಕ ಬೆರೆಸಿ ಸೇವಿಸಲು ನೀಡಿದ್ದರು. ಈ ವೇಳೆ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದರು ಎಂದು ಸಂತ್ರಸ್ತೆ ದೂರಿದ್ದಾಳೆ.
ಕಳೆದ ಮೂರು ವರ್ಷಗಳಿಂದ ಮಹಾಕ್ಷಯ್ ಜೊತೆಗೆ ದೈಹಿಕ ಸಂಬಂಧ ಮುಂದುವರಿಸಿದ್ದಾಗ ನಾನು ಗರ್ಭಿಣಿಯಾಗಿದ್ದೆ. ಆದರೆ ಅವರು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೆಲವು ಮಾತ್ರೆಗಳನ್ನು ಕೊಟ್ಟು ಗರ್ಭಪಾತವಾಗುವಂತೆ ಮಾಡಿದ್ದರು ಎಂದು ನಟಿ ದೂರಿನಲ್ಲಿ ತಿಳಿಸಿದ್ದಾಳೆ.
PublicNext
17/10/2020 03:56 pm