ಶಿವಮೊಗ್ಗ: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲೇ ಇನ್ನೋರ್ವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಹಾಗೂ ಸುತ್ತಲಿನ ಜಿಲ್ಲೆಗಳ ಜನರಿಗೆ ಪರಿಚಿತವಾದ 'ಪ್ರಕಾಶ್' ಬಸ್‌ಗಳ ಮಾಲೀಕ ಪ್ರಕಾಶ್ ಶರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕಾಶ್ ಅವರ ಪಾರ್ಥೀವ ಶರೀರವನ್ನು ಝೀರೋ ಟ್ರಾಫಿಕ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ಯಲಾಗಿದೆ. ಪೈಸೆ ಪೈಸೆ ಕೂಡಿಟ್ಟ ಪ್ರಕಾಶ್ ಉದ್ಯಮದಲ್ಲಿ ಕಷ್ಟಪಟ್ಟು ಮುಂದೆ ಬಂದವರು. ತಮ್ಮ ಉದ್ಯೋಗಿಗಳ ವಿಶ್ವಾಸದೊಂದಿಗೆ ಅಭಿಮಾನವನ್ನೂ ಗಳಿಸಿದ್ದರು. ಆದರೆ ನಿರಂತರ ನಷ್ಟ ಅನುಭವಿಸಿದ್ದ ಪ್ರಕಾಶ್ ಅನಿವಾರ್ಯವಾಗಿ ಸಾಲ ಮಾಡಿದ್ದರು. ಸಾಲದ ಹೊರೆ ಬೆಟ್ಟದಂತೆ ಬೆಳೆದು ಅದರ ಹೊರೆ ತಾಳದೇ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮಣಭಾರದ ಸಾಲವನ್ನು ತೀರಿಸಲು ಆಗದೇ ನದಿಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾರೆ. ಅವರನ್ನು ನಂಬಿ ಜೀವನ ನಡೆಸುತ್ತಿದ್ದ ಅದೆಷ್ಟೋ ಕುಟುಂಬಗಳು ಕಣ್ಣೀರುಡುತ್ತಿದೆ. ಮಲೆನಾಡಿಗೆ ಐವತ್ತು-ಅರವತ್ತು ಬಸ್‌ಗಳ ಮೂಲಕ ಸಂಪರ್ಕ ಬೆಸೆಯುವ ಜೊತೆಗೆ ಶಾಲಾ ಪ್ರವಾಸ, ಮದುವೆ ದಿಬ್ಬಣಕ್ಕೂ ಬಸ್ಗಳು ಸಿಗುತ್ತಿತ್ತು. ಕೊರೋನಾ ಸಂಕಷ್ಟದ ನಡುವೆಯೂ ಸಿಬ್ಬಂದಿಗೆ ವೇತನ ನೀಡುವ ಮೂಲಕ ಪ್ರಕಾಶ್ ಮಾದರಿ ಎನಿಸಿದ್ದರು. ಇದ್ದಕ್ಕಿದ್ದ ಹಾಗೇ ಕಳೆದ ಎರಡು ದಿನಗಳ ಹಿಂದೆ ಶರಾವತಿ ನದಿ ತೀರಿದಲ್ಲಿ ಇವರ ಕಾರು ಪತ್ತೆಯಾಗಿತ್ತು.
PublicNext
25/01/2022 04:25 pm