ಬೆಂಗಳೂರು: ಕನಸ್ಸಿನ ಕಾರು ಕೊಂಡ ಗ್ರಾಹಕನ್ನೊಬ್ಬ ಅದರ ರಿಪೇರಿಯಿಂದ ಬಂದ ಬಿಲ್ ಕಂಡು ಶಾಕ್ ಆಗಿದ್ದಾರೆ. ಹೌದು 11 ಲಕ್ಷ ರೂಪಾಯಿ ಬೆಲೆ ಹೊಂದಿರುವ ಕಾರಿನ ರಿಪೇರಿಗೆ ಬರೋಬ್ಬರಿ 22 ಲಕ್ಷ ರೂಪಾಯಿಯನ್ನು ಸರ್ವೀಸ್ ಸೆಂಟರ್ ನವ್ರು ಕೇಳಿರುವ ವಿಶೇಷ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಹೌದು, ವೋಕ್ಸ್ ವ್ಯಾಗನ್ ಪೋಲೋ ಕಾರಿನ ರಿಪೇರಿಗೆ ಶೋ ರೂಮ್ ನವರು ಬರೋಬ್ಬರಿ 22 ಲಕ್ಷ ರೂಪಾಯಿ ಎಸ್ಟಿಮೇಷನ್ ನೀಡಿದ್ದಾರೆ. ಇದನ್ನು ನೋಡಿದ ಮಾಲೀಕ ಕ್ಷಣ ಕಾಲ ದಂಗಾಗಿದ್ದು, ಈ ಕುರಿತ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರೋ ಪ್ರಾಡಕ್ಟ್ ಮ್ಯಾನೇಜರ್ ಅನಿರುದ್ಧ್ ಗಣೇಶ್ ಅವರ ಕಾರನ್ನು ರಿಪೇರಿ ಮಾಡಲು ಅನಿರುದ್ಧ್, ವೈಟ್ ಫೀಲ್ಡ್ ನ ಆ್ಯಪಿಲ್ ಆಟೋ ವರ್ಕ್ (ವೋಕ್ಸ್ ವ್ಯಾಗನ್ ಡೀಲರ್ ಶಿಪ್)ಗೆ ನೀಡಿದ್ದರು.ಕಾರಿನ ಸ್ಥಿತಿ ಕಂಡ ವರ್ಕ್ ಶಾಪ್ ಸಿಬ್ಬಂದಿ 22 ಲಕ್ಷ ರೂಪಾಯಿ ಅಂದಾಜು ಬಿಲ್ ನೀಡಿದ್ದರಂತೆ. ಕೊನೆಗೆ ಕಂಪನಿಯ ಆದೇಶದ ಮೇರೆಗೆ ಕೇವಲ 5 ಸಾವಿರ ರೂಪಾಯಿ ತೆಗೆದುಕೊಂಡು ಕಾರನ್ನು ಸರಿಪಡಿಸಿದ್ದಾರಂತೆ.
PublicNext
03/10/2022 04:30 pm