ಗಾಂಧಿನಗರ: ಸಂಪ್ರದಾಯಕ್ಕೆ ವಿರುದ್ಧ ನಡೆ ಹಾಗೂ ಐಷಾರಾಮಿ ಜೀವನದಂತಹ ವಿಚಿತ್ರ ಕಾರಣಗಳಿಗೆ ಕೂಡಿ ಬಾಳ ಬೇಕಿದ್ದ ದಂಪತಿ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು. ವಡೋದರಾದಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವಕ ಕೆಲವು ತಿಂಗಳ ಹಿಂದೆ ಶಿಕ್ಷಿಕಿಯನ್ನು ವಿವಾಹವಾಗಿದ್ದನು. ಆದರೆ ವಿಚ್ಛೇದನಕ್ಕಾಗಿ ವಡೋದರಾದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ''ಮದುವೆ ದಿನ ನನ್ನ ಪತ್ನಿ ಮುಟ್ಟಾಗಿದ್ದಳು. ಈ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟಿದ್ದಾಳೆ. ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾಳೆ'' ಎಂದು ಪತಿ ಆರೋಪಿಸಿದ್ದಾನೆ.
ಅಷ್ಟೇ ಅಲ್ಲದೆ ಮದುವೆಯ ದಿನ ರಾತ್ರಿ ಪತ್ನಿಯು ಐಶಾರಾಮಿ ಜೀವನ ನಡೆಸಬೇಕು. ತಿಂಗಳಿಗೆ 5,000 ರೂಪಾಯಿ ನನಗೆ ಕೊಡಬೇಕು. ಕುಟುಂಬದ ಖರ್ಚು ನಿಮ್ಮ ಸಹೋದರ ನೋಡಿಕೊಳ್ಳುತ್ತಾನೆ. ನೀವು ಹಣ ನೀಡುವುದು ಬೇಡ ಎಂದು ಹೇಳಿದ್ದಾಳೆ. ಇದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆನು. ಆಗ ಆಕೆ ನನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹತ್ತು ಜನರ ಜೊತೆಗೆ ಮಲಗ್ಲಾ ಎಂದು ಹೇಳಿ ನನ್ನನ್ನು ಬೆಚ್ಚಿ ಬೀಳುವಂತೆ ಮಾಡಿದ್ದಳು ಎಂದು ಪತಿ ದೂರಿದ್ದಾನೆ.
ಅವಳ ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಜಗಳವಾಗುತ್ತಿತ್ತು. ಇದರಿಂದಾಗಿ ತವರು ಮನೆಗೆ ಹೋದ ಆಕೆ ವಾಪಸ್ ಬರಲೇ ಇಲ್ಲ. ನಾನು ಕರೆದುಕೊಂಡು ಬರಲು ಹೋದಾಗ ಟೆರೇಸ್‌ನಿಂದ ಹಾರಿ ಪ್ರಾಣವನ್ನು ಬಿಡುತ್ತೇನೆ ಎಂದು ನನಗೆ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದ ನಾನು ನನ್ನ ದಾಂಪತ್ಯ ಜೀವನವನ್ನು ಮುರಿದುಕೊಳ್ಳುತ್ತೇನೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾನೆ.
PublicNext
25/12/2020 01:03 pm