ತುಮಕೂರು: ಪಾಪಿ ಪತಿಯೊಬ್ಬ 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪತ್ನಿಯನ್ನ ಕೊಲೆಗೈದು ಮನೆಯಲ್ಲೇ ಹೂತಿಟ್ಟ ಅಮಾನವೀಯ ಘಟನೆ ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಗ್ರಾಮದಲ್ಲಿ ನಡೆದಿದೆ.
ಇಟಕಲೋಟಿ ಗ್ರಾಮದ ನರಸಿಂಹಮೂರ್ತಿ ಕೊಲೆಗೈದ ಪಾಪಿ. ಮೃತಳಿಗೆ 18 ವರ್ಷ ತುಂಬಿರಲಿಲ್ಲ. ಆಗಲೇ ಆತ ಬಾಲ್ಯ ವಿವಾಹ ಮಾಡಿಕೊಂಡಿದ್ದ ಎಂಬ ಮಾತು ಕೇಳಿಬಂದಿದೆ.
ಆರೋಪಿಯು ನನ್ನ ಪತ್ನಿ ಕಾಣೆಯಾಗಿದ್ದಾಳೆ. ಹುಡುಕಿಕೊಡಿ ಎಂದು 15 ದಿನಗಳ ಹಿಂದೆ ಖುದ್ದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಈ ವೇಳೆ ನರಸಿಂಹಮೂರ್ತಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಆಕೆ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯು ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ.
PublicNext
23/12/2020 08:01 pm