ಹೈದರಾಬಾದ್: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಶೋಭನದ ರಾತ್ರಿ ಪತ್ನಿಯ ಗುಪ್ತಾಂಗಕ್ಕೆ ಬ್ಲೇಡ್ ಹಾಕಿ ವಿಕೃತಿ ಮೆರೆದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಪಾಪಿಯು ಪ್ರಕಾಶಂ ಜಿಲ್ಲೆಯವನು ಎಂದು ಗುರುತಿಸಲಾಗಿದೆ. ಆರೋಪಿಯು ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆತನು ಗುಂಟೂರು ಮೂಲದ ಯುವತಿ ಜೊತೆಗೆ ಮದುವೆಯಾಗಿದ್ದ. ಆದರೆ ಒಂದು ತಿಂಗಳ ಬಳಿಕ ಎರಡು ಕುಟುಂಬದ ಹಿರಿಯರು ಮೊದಲ ರಾತ್ರಿ ಶಾಸ್ತ್ರ ನಿಶ್ಚಯ ಮಾಡಿದ್ದಾರೆ.
ಆರೋಪಿಯು ಫಸ್ಟ್‌ನೈಟ್‌ನಲ್ಲಿ ಪತ್ನಿಗೆ ಅರವಳಿಕೆ ಇಂಜೆಕ್ಷನ್ ನೀಡಿ ಬ್ಲೇಡ್‌ನಿಂದ ಆಕೆಯ ಗುಪ್ತಾಂಗದ ಬಳಿ ಗಾಯ ಮಾಡಿ ವಿಕೃತಿ ಮೆರೆದಿದ್ದಾನೆ. ತುಂಬಾ ಹೆದರಿದ ಯುವತಿ ಮರುದಿನ ಎಲ್ಲ ವಿಚಾರವನ್ನು ಹಿರಿಯರಿಗೆ ತಿಳಿಸಿದ್ದಾಳೆ. ಪರಿಣಾಮ ವಧುವಿನ ತಂದೆ ದೂರು ನೀಡಿದ್ದಾರೆ. ಇನ್ನೊಂದು ಕಡೆ ವರನ ಕುಟುಂಬದವರು ನಮ್ಮ ಮಗನ ತಪ್ಪಿಲ್ಲ. ನಿಮ್ಮ ಮಗಳೇ ಅಪ್ರಯೋಜಕಿ ಎಂದು ದೂರಿದ್ದಾರೆ.
PublicNext
23/12/2020 06:47 pm