ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ನೂರೆಂಟು ಶಸ್ತ್ರ ಚಿಕಿತ್ಸೆಗಳ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ. ಕೆಲವೊಮ್ಮೆ ಬಾಹ್ಯ ಸೌಂದರ್ಯಕ್ಕಾಗಿ ಪ್ರಾಣವನ್ನೇ ಬಲಿ ಕೊಡಬೇಕಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಇನ್‌ಸ್ಟಾಗ್ರಾಮ್ ಮಾಡೆಲ್ ಒಬ್ಬರು ಆಕರ್ಷಕ ಪೃಷ್ಟ (Arse) ಹೊಂದಲು ಸರ್ಜರಿ ಮಾಡಿಸಿಕೊಂಡು ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ್ದಾರೆ.
'ಮೆಕ್ಸಿಕನ್ ಕಿಮ್ ಕಾರ್ಡಶಿಯಾನ್' ಎಂದೇ ಖ್ಯಾತಿಯಾಗಿದ್ದ 30 ವರ್ಷದ ಜೋಸೆಲಿನ್ ಕ್ಯಾನೊ ಮೃತ ದುರ್ದೈವಿ. ಕೊಲಂಬಿಯಾದಲ್ಲಿ ಜೋಸೆಲಿನ್ ಕ್ಯಾನೊ ಅವರು ಬಟ್-ಲಿಫ್ಟ್ ಸರ್ಜರಿ (ಪೃಷ್ಟ ಶಸ್ತ್ರಚಿಕಿತ್ಸೆ) ಮಾಡಿಸಿಕೊಂಡಿದ್ದರು. ಆದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
PublicNext
21/12/2020 01:06 pm