ಮುಂಬೈ: ಭಾರೀ ಮೊತ್ತದ ನಿರೀಕ್ಷೆ ಇಟ್ಟು ಖಾಸಗಿ ಬ್ಯಾಂಕ್‌ನ ಎಟಿಎಂ ಮಷೀನ್ ಹೊತ್ತೊಯ್ದ ಕಳ್ಳರು ನಿರಾಸೆಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಉಸಾತ್ನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಳ್ಳರು ಎಟಿಎಂ ಯಂತ್ರವನ್ನು ಹೊತ್ತೊಯ್ಯುವ ಮುನ್ನ ಸ್ಕ್ರೀನ್ ಗಾಜು, ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದಿದ್ದಾರೆ. ಇಷ್ಟೇಲ್ಲ ಹರ ಸಾಹಸಪಟ್ಟ ಕಳ್ಳರಿಗೆ ಎಟಿಎಂ ಯಂತ್ರದಲ್ಲಿ ಕೇವಲ 6,000 ರೂ. ಸಿಕ್ಕಿದೆ.
ಈ ಸಂಬಂಧ ಬ್ಯಾಂಕ್ ಅಧಿಕಾರಿಗಳು ಉಲ್ಲಾಸ್‍ನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 380(ಕಳ್ಳತನ) ಹಾಗೂ 427(ವಂಚನೆ) ಅಡಿ ಅನಾಮಧೇಯ ಕಳ್ಳರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
PublicNext
19/12/2020 06:12 pm